Kannada NewsKarnataka NewsLatest

ಶಿಕ್ಷಕರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ 

ಪ್ರಗತಿವಾಹಿನಿ ಸುದ್ದಿ, ಖಾನಾಪುರ : ಪ್ರಗತಿಪರ ಶಿಕ್ಷಕರ ಪರಿವರ್ತನಾ ಪೆನಲ್ ತಂಡದ ಶಿಕ್ಷಕ ವೃಂದ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ ಹೆಬಳಿ ಅವರ ನೇತೃತ್ವದಲ್ಲಿ ಅನೇಕ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

1988,1998 ಬ್ಯಾಚ್ 2016 ಪದವಿಧರ ಪ್ರಾಥಮಿಕ ಶಿಕ್ಷಕರ ಬ್ಯಾಚನವರ ವೇತನ ಪುನಃಪರಿಷ್ಕರಿಸಿ ವೇತನ ವ್ಯತ್ಯಾಸ ಸರಿಪಡಿಸುವುದು.10,15, 20, 25, 30 ವರ್ಷದ ಟೈಂಬಾಂಡ್ ಗಳನ್ನು  ಸಿ.ಆರ್. ಫಾರ್ಮ್ ಲಭ್ಯಕ್ಕೆ ಒತ್ತಾಯಿಸದೆ ಮಂಜೂರಿಸುವುದು. ಬೂತ್ ಮಟ್ಟದ ಅಧಿಕಾರಿಗಳಿಗೆ 100 ಗಳಿಕೆ ರಜೆ ಮಂಜೂರಾಗಿದ್ದು ಅದಕ್ಕೆ ಬೇಕಾದ ಬಿ.ಎಲ್.ಓ ಪಟ್ಟಿ ತರಿಸಿಕೊಂಡು ಸೇವಾಪುಸ್ತಕದಲ್ಲಿ ಗಳಿಕೆ ರಜೆಗಳನ್ನು ನಮೂದಿಸುವುದು. ಬೇಸಿಗೆ ಸಂಭ್ರಮ ಹಾಗೂ ಬಿಸಿಯೂಟ ಕೆಲಸ ಮಾಡಿದ ಶಿಕ್ಷಕರಿಗೆ ಹಾಗೂ ಪ್ರಧಾನ ಗುರುಗಳಿಗೆ ಗಳಿಕೆ ರಜೆ ಮಂಜೂರಿಸುವುದು. ನವೆಂಬರ್ ತಿಂಗಳವರೆಗೂ ವೇತನ ಅನುದಾನ ಲಭ್ಯವಿದ್ದು  ಪ್ರತಿ ತಿಂಗಳು 1 ನೇ ತಾರೀಖಿಗೆ ವೇತನ ಪಾವತಿ ಮಾಡುವುದು. ತರಬೇತಿಯನ್ನು ರದ್ದು ಮಾಡುವುದು. ಅಥವಾ 5 ದಿನಗಳ ತರಬೇತಿಯನ್ನು  ಶಿಕ್ಷಕರಿಗೆ ಅನುಕೂಲ ಆಗುವ ರೀತಿಯಲ್ಲಿ  ಸುರಕ್ಷತೆಯ ಜೊತೆಗೆ ಅವರ ವಾಸ್ತವ್ಯಕ್ಕೆ ಹತ್ತಿರದ ಸ್ಥಳಗಳಲ್ಲಿ ನಡೆಸುವುದು. ನಿವೃತ್ತ ಶಿಕ್ಷಕರ  ಫೈಲ್ ಗಳನ್ನು ಮೂರು ತಿಂಗಳ ಮುಂಚಿತವಾಗಿ ಕಳಿಸುವುದು. ತರಬೇತಿಗಳಿಗೆ ಆರ್.ಪಿ ಗಳಾಗಿ ಶಿಕ್ಷಕರನ್ನು ಬಳಸಲು ಒತ್ತಾಯಿಸದೆ ಇರುವುದು. ಅತಿ ಮುಖ್ಯವಾಗಿ ಸೇವಾಪುಸ್ತಕಗಳಲ್ಲಿ ಈ ಹಿಂದೆ ಸಹಿ ಮಾಡದೇ ಉಳಿದಿರುವ ಸಹಿಗಳನ್ನು ಮಾಡಿ ಎಚ್.ಆರ್.ಎಂ.ಎಸ್ ನಲ್ಲಿ ಅಪ್ ಡೇಟ್ ಮಾಡುವುದು. ಶಿಕ್ಷಕರ ಸ್ಪಂದನ ಕಾರ್ಯಕ್ರಮ ಮಾಡಿ ಎಸ್.ಆರ್.ಗಳನ್ನು ಝೆರಾಕ್ಸ್  ಮಾಡಿಕೊಳ್ಳಲು ಅವಕಾಶ ನೀಡುವುದು ಮುಂತಾದ ಬೇಡಿಕೆ ಸಲ್ಲಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಸಕಲ ಬೇಡಿಕೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿ, ಒಪ್ಪಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ  ತಂಡದ ಹಿರಿಯರಾದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರು ಬಿ.ಎಂ. ಹಿರೇಮಠ, ಕಾರ್ಯದರ್ಶಿ ಬಾಬು ಸೊಗಲನ್ನವರ, ಬೆಳಗಾವಿ ನಗರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಅದೃಶ ಹೈಬತ್ತಿ , ಬೆಳಗಾವಿ, ಇಟಗಿ ಸೊಸೈಟಿಯ ಅಧ್ಯಕ್ಷ ಪ್ರಕಾಶ ಶೆಟ್ಟೆಣ್ಣವರ , ಖಾನಾಪೂರ ಸೊಸೈಟಿ ಅಧ್ಯಕ್ಷ ಬಿ.ಜಿ. ಪಾಟಿಲ , ಮುರಗೋಡ ,ಅಶೋಕ ಪತ್ತಾರ,ಬೆಳಗಾವಿ ಪ.ಜಾ./ಪ.ಪಂ.ದ ಅಧ್ಯಕ್ಷ ಡಿ.ಎನ್.ಹಲಕಿ,ಬಾಳು ಪಾಟೀಲ,ಹುಕ್ಕೇರಿ, ನೌಕರರ ಸಂಘದ ಖಜಾಂಚಿ ಜೆ.ಪಿ.ಪಾಟೀಲ.ಹೊಸ ಪಿಂಚಣಿ ಯೋಜನೆಯ ಅಧ್ಯಕ್ಷ ಎಸ್.ವೈ. ಪಾಟೀಲ.ಖಾನಪೂರ ಪ.ಜಾ/ಪ.ಪಂ. ಸಂಘದ ಅಧ್ಯಕ್ಷ  ಎ.ಎನ್. ಮಾದಿಗರ  ,ಪದವಿಧರ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ನಾಗಲಾಪೂರ, ಎರಡು ಸೊಸೈಟಿಯ ನಿರ್ದೇಶಕರು, ಹಿರಿಯ ಶಿಕ್ಷಕರು,ಪ್ರಧಾನ ಗುರುಗಳು, ದೈಹಿಕ ಶಿಕ್ಷಕರು ಮತ್ತು  ಸಹ ಶಿಕ್ಷಕ-ಶಿಕ್ಷಕಿಯರು ಮನವಿ ಅರ್ಪಿಸಲು ಉಪಸ್ಥಿತರಿದ್ದರು.

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button