Kannada NewsKarnataka NewsLatest

ಖಾನಾಪುರ ತಾಲೂಕಿನಲ್ಲಿ 14 ಕೊರೋನಾ ಕೇಸ್  

ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಖಾನಾಪುರ ತಾಲೂಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಮವಾರ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ,  ಖಾನಾಪುರ ಪಟ್ಟಣದಲ್ಲಿ 9 ರೋಗಿಗಳು ಸೇರಿದಂತೆ ತಾಲೂಕಿನಲ್ಲಿ14 ಹೊಸ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ.

ಖಾನಾಪುರದ ವಿದ್ಯಾನಗರದಲ್ಲಿ  36, 28, 36 ಮತ್ತು 17 ವರ್ಷ ವಯಸ್ಸಿನ 4 ಪುರುಷರು  ಕೊರೋನಾ ರೋಗಕ್ಕೆ ತುತ್ತಾದರು. ಪ್ರಭುನಗರದಲ್ಲಿ 31 ವರ್ಷದ ವ್ಯಕ್ತಿ, ಅರಣ್ಯ ಇಲಾಖೆಯ 31 ವರ್ಷದ ವ್ಯಕ್ತಿ, ಪಟ್ಟಣ ಪಂಚಾಯತ್‌ನಲ್ಲಿ 25 ವರ್ಷದ ವ್ಯಕ್ತಿ, ಲೋಂಡಾದಲ್ಲಿ 35 ವರ್ಷದ ಮಹಿಳೆ, ಖಾನಾಪುರ ಮಾಯೇಕರ್ ನಗರದಲ್ಲಿ 35 ವರ್ಷದ ವ್ಯಕ್ತಿ ಮತ್ತು ಖಾನಾಪುರ ಬಸ್ ಡಿಪೋದಲ್ಲಿ 29 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

Home add -Advt

ಕರೋನಾದಿಂದ ಮೃತಪಟ್ಟ ಖಾನಾಪುರ ಹೋಟೆಲ್ ಮಾಲಕನೊಂದಿಗೆ ಸಂಪರ್ಕಕ್ಕೆ ಬಂದ ನಾಲ್ವರು ವ್ಯಕ್ತಿಗಳಿಗೆ ಪಾಸಿಟಿವ್ ಬಂದಿದೆ. ಇದರಲ್ಲಿ 40 ಮತ್ತು 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು, 12 ವರ್ಷದ ಬಾಲಕ ಮತ್ತು 43 ವರ್ಷದ ವ್ಯಕ್ತಿ ಸೇರಿದ್ದಾರೆ.

ಒಟ್ಟಾರೆ ಖಾನಾಪುರ ನಗರ ಪ್ರದೇಶದ ಸುತ್ತಲೂ ಕೊರೋನಾ ತನ್ನ ಹಿಡಿತವನ್ನು ಬಿಗಿಗೊಳಿಸಿದೆ. ನಗರ ಹಾಗೂ ತಾಲೂಕಿನ  ವಿವಿಧ ಭಾಗಗಳಲ್ಲಿ ಪಾಸಿಟಿವ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜನರಲ್ಲಿ ಭಯ ಹೆಚ್ಚುತ್ತಿದೆ.

 

 

 

Related Articles

Back to top button