Latest

ರಾಜ್ಯ ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು  – ಭಾರತೀಯ ಜನತಾ ಪಾರ್ಟಿ ರಾಜ್ಯ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿದೆ.

10 ರಾಜ್ಯ ಉಪಾಧ್ಯಕ್ಷರು, 4 ರಾಜ್ಯ ಪ್ರಧಾನ ಕಾರ್ಯದರ್ಶಿಗಳು, 10 ರಾಜ್ಯ ಕಾರ್ಯದರ್ಶಿಗಳು, 2 ರಾಜ್ಯ ಖಜಾಂಚಿಗಳು ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರನ್ನೂ ನೇಮಕ ಮಾಡಲಾಗಿದೆ.

Home add -Advt

ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರೈತ ಮೋರ್ಚಾ ರಾಜ್ಯಾಧ್ಯಕ್ಷರಾಗಿದ್ದಾರೆ. ಬೆಳಗಾವಿಯ ಭಾರತಿ ಮುಗ್ದುಂ ಮತ್ತು ಉಜ್ವಲಾ ಬಡವಣಾಚೆ ರಾಜ್ಯ ಕಾರ್ಯದರ್ಶಿಗಳಾಗಿದ್ದಾರೆ.

ರಾಜ್ಯ ಉಪಾಧ್ಯಕ್ಷರಾಗಿ ಅರವಿಂದ ಲಿಂಬಾವಳಿ, ನಿರ್ಮಲಕುಮಾರ ಸುರಾಣಾ, ಶೋಭಾ ಕರಂದ್ಲಾಚೆ, ಮಾಲಿಕಯ್ಯ ಗುತ್ತೆದಾರ್, ತೇಜಸ್ವಿನಿ ಅನಂತಕುಮಾರ, ಪ್ರತಾಪ ಸಿಂಹ, ಎಂ.ಬಿ.ನಂದೀಶ್, ಬಿ.ವೈ.ವಿಜಯೇಂದ್ರ, ಎಂ.ಶಂಕರಪ್ಪ, ಎಂ.ರಾಜೇಂದ್ರ ನೇಮಕವಾಗಿದ್ದಾರೆ.

ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಎನ್.ರವಿಕುಮಾರ, ಸಿದ್ದರಾಜು, ಅಶ್ವತ್ಥನಾರಾಯಣ, ಮಹೇಶ ಟೆಂಗಿನಕಾಯಿ ನೇಮಕವಾಗಿದ್ದಾರೆ.

ರಾಜ್ಯ ಕಾರ್ಯದರ್ಶಿಗಳಾಗಿ ಸತೀಶ್ ರೆಡ್ಡಿ, ತುಳಸಿ ಮುನಿರಾಜು ಗೌಡ, ಎಸ್ ಕೇಶವಪ್ರಸಾದ, ಸುಧಾ ಜಯರುದ್ರೇಶ್, ಜಗದೀಶ ಹಿರೇಮನಿ, ಭಾರತಿ ಮಗ್ದುಂ, ಹೇಮಲತಾ ನಾಯಕ, ಉಜ್ವಲಾ ಬಡವಣಾಚೆ, ಕೆ.ಎಸ್.ನವೀನ್, ವಿನಯ ಬಿದರೆ ನೇಮಕವಾಗಿದ್ದಾರೆ.

ರಾಜ್ಯ ಖಜಾಂಚಿಗಳಾಗಿ ಸುಬ್ಬ ನರಸಿಂಹ, ಲೆಹರಿ ಸಿಂಗ್ ಸಿರೋಯ, ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೆೇಶ್ ಅಂಬೇಕಲ್ಲು, ರಾಜ್ಯವಕ್ತಾರರಾಗಿ ಕ್ಯಾ.ಗಣೇಶ ಕಾರ್ಣಿಕ್ ನೇಮಕವಾಗಿದ್ದಾರೆ.

ಪ್ರಕೋಷ್ಠ ಸಂಯೋಜಕರಾಗಿ ಎಂ.ಬಿ.ಭಾನುಪ್ರಕಾಶ ಮತ್ತು ಎ.ಎಚ್.ಶಿವಯೋಗಿಸ್ವಾಮಿ, ಯುವಮೋರ್ಚಾ ಅಧ್ಯಕ್ಷರಾಗಿ ಡಾ.ಸಂದೀಪ್, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಗೀತಾ ವಿವೇಕಾನಂದ, ರೈತಮೋರ್ಚಾ ಅಧ್ಯಕ್ಷರಾಗಿ ಈರಣ್ಣ ಕಡಾಡಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಅಶೋಕ ಗಸ್ತಿ, ಎಸ್ ಸಿ ಮೋರ್ಚಾ ಅಧ್ಯಕ್ಷರಾಗಿ ಚಲುವಾದಿ ನಾರಾಯಣ ಸ್ವಾಮಿ, ಎಸ್ಟಿ ಮೋರ್ಚಾ ತಿಪ್ಪರಾಜು ಹವಾಲ್ದಾರ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಮುಜಾಮಿಲ್ ಬಾಬು ನೇಮಕವಾಗಿದ್ದಾರೆ.

 

Related Articles

Back to top button