Latest

ಮೂರು ವರ್ಷದ ಬಾಲಕಿಯನ್ನು ಹೊತ್ತೊಯ್ದ ಯುವಕ

ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಯುವಕನೊಬ್ಬ ಮೂರು ವರ್ಷದ ಬಾಲಕಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಕಲಬುರ್ಗಿಯ ಜುಬೇರ್ ಕಾಲೊನಿಯಲ್ಲಿ ನಡೆದಿದೆ.

ಆಟವಾಡುತ್ತಿದ್ದ ಬಾಲಕಿಯನ್ನು ಯುವಕನೋರ್ವ ಪುಸಲಾಯಿಸಿ ಹೊತ್ತೊಯ್ದಿದ್ದಾನೆ. ಪೋಷಕರಿಗೆ ವಿಷಯ ತಿಳಿಯುವ ವೇಳೆಗೆ ಸುಮಾರು ಒಂದು ಕಿಲೋಮೀಟರ್ ದೂರದವರೆಗೊ ಮಗುವನ್ನು ಹೊತ್ತೊಯ್ದಿದ್ದಾನೆ.

ತಕ್ಷಣ ಮಗುವಿನ ತಂದೆ ತನ್ನ ಆಟೋದಲ್ಲಿ ಅಪಹರಣಕಾರನ ಬೆನ್ನು ಹತ್ತಿ ಆರೋಪಿಯನ್ನು ಹಿಡಿದು, ಮಗುವನ್ನು ರಕ್ಷಿಸಿದ್ದಾನೆ. ಮೂರು ವರ್ಷದ ನೆಹೆರಾ ಬೇಗಂ ಅಪಹರಣಕಾರನಿಂದ ಬಚಾವಾದ ಬಾಲಕಿ.

ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮೀಣ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿ ಮಹ್ಮದ್ ಇಮ್ತಿಯಾಜ್ ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ಜೇಬಿನಲ್ಲಿ ಕೆಲ ಟ್ಯಾಬ್ಲೆಟ್ ಗಳು ಸಿಕ್ಕಿದ್ದು, ಯುವಕ ಡ್ರಗ್ಸ್ ವ್ಯಸನಿಯಿರಬಹುದು ಎಂದು ಶಂಕಿಸಲಾಗಿದೆ.

Related Articles

Back to top button