Latest

ಸ್ನೇಹಿತನನ್ನು ಕೂಡಿಹಾಕಿ ಆತ್ಮಹತ್ಯೆಗೆ ಶರಣಾದ ಯುವಕ

ಪ್ರಗತಿವಾಹಿನಿ ಸುದ್ದಿ; ಬೆಂಗಳುರು: ತನ್ನ ಸ್ನೇಹಿತನನ್ನು ರೋಮಿನಲ್ಲಿ ಕೂಡಿಹಾಕಿ ಕಾನೂನು ವಿದ್ಯಾರ್ಥಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಆನೆಕಲ್ ನಲ್ಲಿ ನಡೆದಿದೆ.

ಕೌಶಿಕ್ (20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮೃತ ಕೌಶಿಕ್ ಆನೇಕಲ್ಲಿನ ಅಲೈನ್ಸ್ ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಮಾಡುತ್ತಿದ್ದ. ಕಾಲೇಜು ರಜಾ ಇರುವುದರಿಂದ ಪಕ್ಕದಲ್ಲಿನ ಈಡನ್ ಗಾರ್ಡನ್‍ನಲ್ಲಿ ಮನೆ ಮಾಡಿಕೊಂಡು ವಾಸವಿದ್ದನು.

Home add -Advt

ಕೌಶಿಕ್ ತನ್ನ ಸ್ನೇಹಿತನ ಜತೆ ಹೊರಗೆ ಹೋಗಿ ಪಾರ್ಟಿ ಮಾಡಿ ಬಂದಿದ್ದ. ಹೀಗೆ ಬರುವಾಗ ಹೊಸೂರು ಬಳಿ ಆತನ ಕಾರು ಅಪಘಾತಕ್ಕೀಡಾಗಿತ್ತು. ಸ್ಥಳೀಯರು ಕೌಶಿಕ್‍ನನ್ನು ರಕ್ಷಿಸಿ ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಕೌಶಿಕ್ ಆಸ್ಪತ್ರೆಗೆ ಹೋಗದೆ ಮನೆಗೆ ಬಂದಿದ್ದ.

ಮನೆಗೆ ಬಂದಿದ್ದವನೇ ಸ್ನೇಹಿತನನ್ನು ರೂಮಿನಲ್ಲಿ ಕೂಡಿಹಾಕಿ ಕೌಶಿಕ್ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ನೇಹಿತ ಕೂಗಾಡಿದಾಗ ಸ್ಥಳೀಯರು ಬಂದು ನೋಡಿದ್ದಾರೆ. ಆದರೆ ಅಷ್ಟರಲ್ಲಿ ಕೌಶಿಕ್ ಸಾವನ್ನಪ್ಪಿದ್ದ.

ಕೌಶಿಕ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಆನೆಕಲ್ ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button