Latest

ಸಿಸಿಬಿಯಿಂದ ಮೂವರ ವಿಚಾರಣೆ ಅಂತ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ ಖ್ಯಾತ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಹಾಗೂ ಯುವರಾಜ್ ಅವರ ಸಿಸಿಬಿ ವಿಚಾರಣೆ ಅಂತ್ಯಗೊಂಡಿದೆ.

ಪ್ರಕರಣ ಸಂಬಂಧ ಸಿಸಿಬಿ ನೋಟೀಸ್ ಹಿನ್ನಲೆಯಲ್ಲಿ ಇಂದು ಮೂವರು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಸತತ 7 ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಮೂವರ ಮೊಬೈಲ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ವಿಚಾರಣೆ ಅಂತ್ಯಗೊಂಡಿದ್ದು, ಮೂವರು ಸಿಸಿಬಿ ಕಚೇರಿಯಿಂದ ತೆರಳಿದ್ದಾರೆ.

Home add -Advt

ವಿಚಾರಣೆ ಬಳಿಕ ಮಾತನಾಡಿದ ನಿರೂಪಕ ಅಕುಲ್, ಸಿಸಿಬಿ ವಿಚಾರಣೆಗೆ ನಾವು ಸಹಕರಿಸಿದ್ದೇವೆ. ನಮ್ಮ ಮೊಬೈಲ್ ನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಪರಿಶೀಲಿಸಿ ನಾಳೆ ಕೊಡುವುದಾಗಿ ತಿಳಿಸಿದ್ದಾರೆ. ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಮತ್ತೆ ವಿಚಾರಣೆಗೆ ಕರೆದರೆ ಬರಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

Related Articles

Back to top button