Kannada NewsLatest

ಮನೆ ಕೆಲಸದವಳಿಂದಾಗಿ ನಮ್ಮ ಸಂಸಾರದಲ್ಲಿ ಬಿರುಕು – ಕೆ.ಕಲ್ಯಾಣ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮನೆ ಕೆಲಸದವಳಿಂದಾಗಿ ನಮ್ಮ ಸಂಸಾರದಲ್ಲಿ ಸಮಸ್ಯೆ ಆರಂಭವಾಯಿತು ಎಂದು ಖ್ಯಾತ ಗೀತ ಸಾಹಿತಿ ಕೆ.ಕಲ್ಯಾಣ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಾನು, ಪತ್ನಿ ಮತ್ತು ಅವಳ ತಂದೆ, ತಾಯಿ ಒಟ್ಟಿಗೆ ಇರುತ್ತಿದ್ದೆವು. ಗಂಗಾ ಕುಲಕರ್ಣಿ ಎನ್ನುವವಳನ್ನು ಮನೆ ಅಡುಗೆ ಕೆಲಸಕ್ಕೆಂದು ನೇಮಿಸಿಕೊಂಡ ನಂತರ ನಮ್ಮ ಸಂಸಾರದಲ್ಲಿ ಬದಲಾವಣೆ ಆರಂಭವಾಯಿತು. ಬಾಗಲಕೋಟೆಯಲ್ಲಿ ಶಿವಾನಂದ ವಾಲಿ ಎನ್ನುವವರೊಬ್ಬರು ನನಗೆ ಬೇಕಾದ ಗುರೂಜಿ ಇದ್ದಾರೆ ಎಂದು ಹೇಳಿ ಗಂಗಾ ಕುಲಕರ್ಣಿ ನನ್ನ ಅತ್ತೆಯ ಮನಸ್ಸನ್ನು ತಿರುಗಿಸಿದಳು. ಅತ್ತೆ ಮಧ್ಯ ರಾತ್ರಿ ಎಲ್ಲ ಪೂಜೆ ಮಾಡಲು ಆರಂಭಿಸಿದಳು. ನನ್ನ ಪತ್ನಿಯ ಖಾತೆಯಿಂದ ಲಕ್ಷ ಲಕ್ಷ ಹಣ ಶಿವಾನಂದ ವಾಲಿ ಹೆಸರಿಗೆ ವರ್ಗಾವಣೆಯಾಗಿದೆ. ನನ್ನ ಅತ್ತೆ, ಮಾವನ ಆಸ್ತಿ ಕೂಡ ಶಿವಾನಂದ ವಾಲಿ ಹೆಸರಿಗೆ ಹೋಗಿದೆ. ಮಾಟ ಮಂತ್ರ ಹೆಸರಿನಲ್ಲಿ ಗಂಗಾ ಕುಲಕರ್ಣಿ ಮತ್ತು ಶಿವಾನಂದ ವಾಲಿ ಸೇರಿ ನಮ್ಮ ಸಂಸಾರವನ್ನು ಹಾಳು ಮಾಡಿದ್ದಾರೆ ಎಂದು ತಿಳಿಸಿದರು.

Home add -Advt

ನನ್ನ ಪತ್ನಿ ನನ್ನಿಂದ ಅಷ್ಟೆ ಅಲ್ಲ, ಹಲವಾರು ನಮ್ಮ ಸಂಬಂಧಿಕರಿಂದಲೂ ಹಣ ಪಡೆದು ಶಿವಾನಂದ ವಾಲಿ ಹೆಸರಿಗೆ ವರ್ಗಾಯಿಸಿದ್ದಾಳೆ. 14 ವರ್ಷದ ನಮ್ಮ ದಾಂಪತ್ಯ ಇವರಿಂದಾಗಿ ಹಾಳಾಗಿದೆ. ಈಚೆಗೆ ಪತ್ನಿ ಮತ್ತು ಆಕೆಯ ತಂದೆ, ತಾಯಿ ಬೆಳಗಾವಿಗೆ ಹೋಗಿ ಬರುತ್ತೇವೆ ಎಂದು ಬಂದವರು ನನ್ನ ಹಾಗೂ ನಮ್ಮ ಸಂಬಂಧಿಕರೆಲ್ಲರ ಸಂಪರ್ಕ ಕಡಿದುಕೊಂಡರು. ಅಲ್ಲಿಂದ ಸಮಸ್ಯೆ ತೀವ್ರವಾಯಿತು. ಶಿವಾನಂದ ವಾಲಿ ವಿರುದ್ಧ ನಾನು ಅಪಹರಣ ಪ್ರಕರಣ ದಾಖಲಿಸಿ, ಆತನನ್ನು ಪೊಲೀಸರು ವಶಕ್ಕೆ ಪಡೆದ ನಂತರ ಪತ್ನಿ ನನ್ನ ವಿರುದ್ಧ ಆರೋಪಗಳನ್ನು ಮಾಡತೊಡಗಿದ್ದಾಳೆ ಎಂದೂ ಅವರು ವಿವರಿಸಿದರು.

ನಮ್ಮ ಸಂಸಾರ ಸರಿ ಹೋಗುತ್ತದೆ. ಪೊಲೀಸರು, ನ್ಯಾಯಾಲಯ ಎಲ್ಲವನ್ನೂ ಸರಿಮಾಡುತ್ತದೆ. ಮತ್ತೆ ನಾನು ಪತ್ನಿಯೊಂದಿಗೆ ಬಂದು ಪತ್ರಿಕಾಗೋಷ್ಠಿ ನಡೆಸುತ್ತೇನೆ. ಆಕೆ ಒಳ್ಳೆಯ ಗಾಯಕಿ. ಅವಳಿಂದ ಒಳ್ಳೆಯ ಹಾಡು ಹೇಳಿಸುತ್ತೇನೆ ಎಂದರು ಕಲ್ಯಾಣ.

2 ಗಂಟೆ ಕೌನ್ಸಿಲಿಂಗ್ ಮಾಡಿದರೆ ಪತ್ನಿ ಸರಿ ಹೋಗ್ತಾಳೆ, ಅವಳು ಕೆಟ್ಟವಳಲ್ಲ – ಕೆ.ಕಲ್ಯಾಣ್

ನಮ್ಮ ದಾಂಪತ್ಯದಲ್ಲಿ ಬಿರುಕು ಅಚ್ಚರಿಯಾಗಿದೆ – ಕೆ.ಕಲ್ಯಾಣ್

 

Related Articles

Back to top button