Latest

ಅನಂತ ಪದ್ಮನಾಭಸ್ವಾಮಿ ದೇವಾಲಯದ ಅರ್ಚಕರು ಸೇರಿ 12 ಸಿಬ್ಬಂದಿಗಳಿಗೆ ಕೊರೊನಾ ಸೋಂಕು

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಕೇರಳದ ಪ್ರಸಿದ್ಧ ಅನಂತಪದ್ಮನಾಭಸ್ವಾಮಿ ದೇವಾಲಯದ ಪ್ರಧಾನ ಅರ್ಚಕರು ಸೇರಿ 12 ಅರ್ಚಕರಿಗೆ ಕೊರೊನಾ ಸೋಂಕು ದೃಢಪಟ್ಟದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ದೇವಸ್ಥಾನ ಪ್ರವೇಶವನ್ನು ಭಕ್ತರಿಗೆ ನಿರ್ಬಂಧಿಸಲಾಗಿದೆ.

ಅನಂತ ಪದ್ಮನಾಭಸ್ವಾಮಿ ದೇವಾಲಯದ ಇಬ್ಬರು ಪ್ರಧಾನ ಅರ್ಚಕರು ಸೇರಿದಂತೆ 12 ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 15ರವರೆಗೆ ದೇವಾಲಯವನ್ನು ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದ್ದು, ದೈನಂದಿನ ಪೂಜೆ ತಂತ್ರಿಗಳಿಂದ ನಡೆಯಲಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

ಕೊರೊನಾ ಲಾಕ್ ಡೌನ್ ಬಳಿಕ ಆಗಸ್ಟ್ 27ರಿಂದ ದೇವಾಲಯವನ್ನು ತೆರೆಯಲಾಗಿದ್ದು, ಆದರೀಗ ಅರ್ಚಕರು ಸೇರಿದಂತೆ ಹಲವು ಸಿಬ್ಬಂದಿಗಳಿಗೆ ಸೋಂಕು ಹರಡಿರುವ ಹಿನ್ನೆಲೆಯಲಿ ಕೆಲದಿನಗಳ ವರೆಗೆ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

Related Articles

Back to top button