Kannada NewsKarnataka News

ಅಗೆದು ಹಾಕಿದ್ದ ರಸ್ತೆ ದುರಸ್ತಿಯಾಯ್ತು, ಇನ್ನೇನಿದ್ರು ಪಾಲಿಕೆ ಸರದಿ

ಪ್ರಗತಿವಾಹಿನಿ ಸುದ್ದಿ, ಬೆೆಳಗಾವಿ – ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಗೆದು ಹಾಕಿದ್ದ ರಾಣಿ ಚನ್ನಮ್ಮ ನಗರದ ರಸ್ತೆಗಳನ್ನು ಮುಚ್ಚಿ ಡಾಂಬರ್ ಹಾಕುತ್ತಿದೆ.

ವಾಹನಗಳು ಮತ್ತು ಪಾದಚಾರಿಗಳು ಸಂಚರಿಸಲಾಗದಂತೆ ಅಗೆದು ಹಾಕಿದ್ದ ಕೆಯುಡಬ್ಲ್ಯುಎಸ್, ಪ್ರಗತಿವಾಹಿನಿಯಲ್ಲಿ ವರದಿ ಪ್ರಕಟವಾದ ಮರುದಿನವೇ ಕಲ್ಲು ಕಡಿ ಹಾಕಿ ಮುಚ್ಚಿತ್ತು. ಇದೀಗ ಅದರ ಮೇಲೆ ಡಾಂಬರನ್ನೂ ಹಾಕಿ ಮುಚ್ಚುವ ಕೆಲಸ ಮಾಡುತ್ತಿದೆ.

ರಾಣಿ ಚನ್ನಮ್ಮ ನಗರದ ಒಳ ರಸ್ತೆಗಳು ಪೆವರ್ಸ್ ಗಳಿಂದ ಹೊಸದಾಗಿ ನಿರ್ಮಾಣವಾಗಿವೆ. ಆದರೆ ಮುಖ್ಯ ರಸ್ತೆ ಮಾತ್ರ ಸಂಪೂರ್ಣ ಹದಗೆಟ್ಟಿದೆ. ಇದರ ಜೊತೆಗೆ ಕೆಯುಡಬ್ಲ್ಯುಎಸ್ ಪೈಪ್ ಅಳವಡಿಸಲು ಅಗೆದು ಅರ್ಧ ರಸ್ತೆಯೇ ಸಂಚಾರಕ್ಕೆ ಸಿಗದಂತೆ ಮಾಡಿತ್ತು.

ಈಗ ಕೆಯುಡಬ್ಲ್ಯುಎಸ್ ತಾನು ಅಗೆದಿದ್ದ ರಸ್ತೆಯನ್ನು ಸರಿಪಡಿಸಿದೆ. ಇನ್ನೇನಿದ್ದರೂ ಮಹಾನಗರ ಪಾಲಿಕೆಯ ಕೆಲಸ. ಮುಖ್ಯರಸ್ತೆಯನ್ನು ದುರಸ್ತಿಪಡಿಸುವ, ಹೊಸದಾಗಿ ನಿರ್ಮಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಿದೆ.

ಒಳ ರಸ್ತೆಗಳನ್ನೆಲ್ಲ ಸುಂದರವಾಗಿ ನಿರ್ಮಿಸಿರುವ ಶಾಸಕ ಅಭಯ ಪಾಟೀಲ, ಮುಖ್ಯರಸ್ತೆ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಬೇಕಿದೆ.

ಪ್ರಗತಿವಾಹಿನಿ ಪ್ರಕಟಿಸಿದ್ದ ವರದಿ – 

ರಸ್ತೆ ಅಗೆದು ನಿದ್ರೆಗೆ ಜಾರಿದ ಅಧಿಕಾರಿಗಳು: ಹೇಳೋರಿಲ್ಲ, ಕೇಳೋರಿಲ್ಲ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button