Latest

ಹೃದಯಾಘಾತ; ಮತ ಎಣಿಕೆ ಕೇಂದ್ರದಲ್ಲೇ ಚುನಾವಣಾಧಿಕಾರಿ ಸಾವು

ಪ್ರಗತಿವಾಹಿನಿ ಸುದ್ದಿ; ಮೈಸೂರು: ಚುನಾವಣಾಧಿಕಾರಿಯೊಬ್ಬರು ಮತ ಎಣಿಕೆ ಕೇಂದ್ರದಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಮೃತರನ್ನು ಬೋರೇಗೌಡ (52) ಎಂದು ಗುರುತಿಸಲಾಗಿದೆ. ಬೋರೇಗೌಡ ಲೋಕೋಪಯೋಗಿ ಇಲಾಖೆ ಅಭಿಯಂತರರಾಗಿದ್ದು, ಪಿರಿಯಾಪಟ್ಟಣ ತಾಲೂಕಿನ ಎನ್.ಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಚುನಾವಣಾಧಿಕಾರಿಯಾಗಿ ನಿಯೋಜನೆಗೊಂಡಿದ್ದರು.

Home add -Advt

ಪುಷ್ಪ ವಿದ್ಯಾ ಸಂಸ್ಥೆಯ ಆವರಣದಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಕರ್ತ್ಯವ್ಯಕ್ಕೆ ಹಾಜರಾಗಿದ್ದ ಬೋರೇಗೌಡ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆದರೂ ಮಾರ್ಗಮಧ್ಯೆಯೇ ಬೋರೇಗೌಡ ಮೃತಪಟ್ಟಿದ್ದಾರೆ.

Related Articles

Back to top button