Latest

ಐಇಡಿ ಸ್ಫೋಟ; 30 ಉಗ್ರರು ಸಾವು

ಪ್ರಗತಿವಾಹಿನಿ ಸುದ್ದಿ; ಕಾಬೂಲ್: ಸುಧಾರಿತ ಐಇಡಿ ಸ್ಫೋಟಗೊಂಡು 30 ತಾಲಿಬಾನ್ ಉಗ್ರರು ಸಾವನ್ನಪ್ಪಿರುವ ಘಟನೆ ಅಪ್ಘಾನಿಸ್ತಾನದ ಬಾಲ್ಕ್ ಪ್ರಾಂತ್ಯದಲ್ಲಿ ನಡೆದಿದೆ.

ದಾವ್ಲತಾಬಾದ್ ಜಿಲ್ಲೆಯ ಕಲ್ಟಾ ಗ್ರಾಮದಲ್ಲಿ ಸ್ಫೋಟಕ ಸಾಧನಗಳು ಮತ್ತು ಬಾಂಬ್ ಗಳನ್ನು ತಯಾರಿಸುವ ತರಬೇತಿ ಪಡೆಯುತ್ತಿದ್ದ ವೇಳೆ ಐಇಡಿ ಸ್ಫೋಟಗೊಂಡಿದೆ. ಈ ಬಗ್ಗೆ ತಾಲಿಬಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಪ್ಘಾನಿಸ್ತಾನದ ದೋಹಾದಲ್ಲಿ ಅಪ್ಘನ್ ಸರ್ಕಾರ ಹಾಗೂ ತಾಲಿಬಾನ್ ಪ್ರತಿನಿಧಿಗಳ ನಡುವಿನ ಶಾಂತಿ ಮಾತುಕತೆ ಸ್ಥಗಿತಗೊಂಡ ಬೆನ್ನಲ್ಲೇ ಫೆ.11 ಮತ್ತು 12ರಂದು ಅಘಾನಿಸ್ತಾನ ಸೇನೆ ದಾಳಿ ನಡೆಸಿ 90ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿತ್ತು.

 

Related Articles

Back to top button