ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಟಿಎಂಎಫ್ (ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್) ಅಧಿಕಾರಿ ವಿಕ್ಟರ್ ಸೈಮನ್ ರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಮನ್ ಮನೆ ಮೇಲೆ ಎಸಿಬಿ ಎಸ್ ಪಿ ಕುಲದೀಪ್ ಜೈನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು.
ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿ 1 ಪ್ಲಾಟ್, ಮೈಸೂರಿನಲ್ಲಿ ಸುಮಾರು 129 ಚದರ ಅಡಿಯ ಬೃಹತ್ ಮನೆ, ಮೈಸೂರಿನಲ್ಲಿ 2 ನಿವೇಶನ, ಮೈಸೂರು ಜಿಲ್ಲೆಯ 2 ಕಡೆ 10 ಎಕರೆ ಕೃಷಿ ಜಮೀನು, 1 ಕೋಟಿ ಮೌಲ್ಯದ ಬಾಂಡ್ ಪೇಪರ್, ಬ್ಯಾಂಕ್ ಲಾಕರ್ ಗಳಲ್ಲಿ 500 ಗ್ರಾಂ ಚಿನ್ನ ದೊರಕಿತ್ತು. ಅಲ್ಲದೇ ವಾಸವಿದ್ದ ಮನೆಯಲ್ಲಿ 7.26 ಲಕ್ಷ ರೂಪಾಯಿ ನಗದು, ವಿದೇಶಿ ಮದ್ಯದ ಬಾಟಲ್ ಗಳು, 1 ಹ್ಯೂಂಡೈ ವರ್ಣ ಕಾರು ಹಾಗೂ 21.61 ಲಕ್ಷ ರೂಪಾಯಿ ಮೌಲ್ಯದ ಗೃಹೊಪಯೋಗಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ವಿಕ್ಟರ್ ಸೈಮನ್ ರನ್ನು ಬಂಧಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ