Latest

ಈ ಸಿಡಿ ಪ್ರಕರಣ ಬೆಂಗಳೂರಿಗೆ ಸೀಮಿತವಾಗಿದೆ, ಹಾಗಾಗಿ ಇಲ್ಲೇ ದೂರು ದಾಖಲಿಸಿದ್ದೇನೆ – ರಮೇಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಿಡಿ ಪ್ರಕರಣಕ್ಕೆ ಸಬಂಧಿಸಿದಂತೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ, ವಕೀಲರ ಸಲಹೆಯ ಮೇರೆಗೆ ದೂರಿನಲ್ಲಿ ಯಾರದ್ದೂ ಹೆಸರು ಉಲ್ಲೇಖಿಸಿಲ್ಲ ಎಂದು ತಿಳಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಕೊನೆಯ ತನಕವೂ ಬಿಡುವುದಿಲ್ಲ.  ವಕೀಲರ ಸಲಹೆಯಂತೆ ದೂರು ದಾಖಲು ಮಾಡಿದ್ದೇನೆ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಆದರೆ ದೂರಿನಲ್ಲಿ ವಕೀಲರ ಸಲಹೆಯ ಮೇರೆಗೆ ಯಾವುದೇ ಹೆಸರನ್ನು ಹಾಕಿಲ್ಲ ಎಂದರು.

Home add -Advt

ಬೆಳಗಾವಿಯಲ್ಲೂ ದೂರು ದಾಖಲಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣ ಬೆಂಗಳೂರಿಗೆ ಸೀಮಿತವಾಗಿದೆ. ಹಾಗಾಗಿ ಬೆಳಗಾವಿಯಲ್ಲಿ ದೂರು ದಾಖಲಿಸುವ ಬಗ್ಗೆ ಯೋಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಿಡಿ ಪ್ರಕರಣಕ್ಕಾಗಿ ನೂರಾರು ಕೋಟಿ ರೂ. ಖರ್ಚು ಮಾಡಲಾಗಿದೆ. ಈಗಾಗಲೆ ಎಸ್ಐಟಿ ವಶಕ್ಕೆ ಪಡೆದಿರುವವರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದೂ ಅವರು ಹೇಳಿದರು.

ಸದಾಶಿವನಗರದಲ್ಲಿ ಷಢ್ಯಂತ್ರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಅವರು, 3 ತಿಂಗಳಿನಿಂದ ಬ್ಲ್ಯಾಕ್ ಮೇಲೆ ಮಾಡುವ ಯತ್ನ ನಡೆದಿತ್ತು ಎಂದು ದೂರಿದ್ದಾರೆ. ಈ ಮೊದಲು ಅವರು ಯಶವಂತಪುರ ಮತ್ತು ಓರಿಯನ್ ಮಾಲ್ ಬಳಿ ಷಢ್ಯಂತ್ರ ನಡೆದಿದೆ ಎಂದು ಅವರು ಹೇಳಿದ್ದರು.

ಈ ಸಂಬಂಧ ಎಫ್ಐಆರ್ ದಾಖಲಾಗಿದೆ.

ರಾಸಲೀಲೆ ಸಿಡಿ ಪ್ರಕರಣ; ಆಪ್ತನ ಮೂಲಕ ದೂರು ದಾಖಲಿಸಿದ ರಮೇಶ್ ಜಾರಕಿಹೊಳಿ

Related Articles

Back to top button