ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪದೇ ಪದೇ ಪುಂಡಾಟಿಕೆ ಮೆರೆಯುತ್ತಿರುವ ಶಿವಸೇನೆಗೆ ತಕ್ಕ ಪಾಠ ಕಲಿಸುತ್ತೇವೆ. ಎಬಿಸಿಡಿ ಜೊತೆಗೆ ಕನ್ನಡ ಅಕ್ಷರ ಮಾಲೆಯನ್ನೂ ಕಲಿಸಿಕೊಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಆರ್.ಅಶೋಕ್, ರಾಜ್ಯದಲ್ಲಿ ಶಿವಸೇನೆ ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಆದರೆ ಶಿವಸೇನೆ ಒಂದು ರಾಜಕೀಯ ಪಕ್ಷ ಹಾಗಾಗಿ ಅದನ್ನು ನಿಷೇಧಿಸಲು ಅವಕಾಶವಿದೆಯೇ ಎಂಬುದು ಗೊತ್ತಿಲ್ಲ. ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಗಡಿ ವಿಚಾರದಲ್ಲಿ ರಾಜಿಯಿಲ್ಲ. ಶಿವಸೇನೆ, ಎಂಇಎಸ್ ಪುಂಡಾಟಕ್ಕೆ ಕ್ರಮ ಕೈಗೊಳ್ಳಾಗುವುದು. ಶಿವಸೇನೆಗೆ ಎಬಿಸಿಡಿಯ ಜೊತೆಗೆ ಕನ್ನಡ ಅಕ್ಷಮಾಲೆಯ ಪಾಠವನ್ನೂ ಹೇಳಿಕೊಡುತ್ತೇವೆ. ಗಡಿಯಲ್ಲಿ ಶಾಂತಿ ಕಾಪಾಡಲು ಸರ್ಕಾರ ಮುಂದಾಗಲಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ