Latest

ಅತ್ಯಾಚಾರ ಆರೋಪ; ಪತ್ನಿ, ಮಗಳ ಹೆಸರು ಬರೆದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಕೊಡಗು: ತನ್ನ ಸಾವಿಗೆ ಪತ್ನಿ ಹಾಗೂ ಮಗಳೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಅತ್ಯಾಚಾರ ಆರೋಪದಿಂದ ಮುಕ್ತನಾಗಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯ ಮರಗೋಡು ಗ್ರಾಮದಲ್ಲಿ ನಡೆದಿದೆ.

ಪುದಿಯೊಕ್ಕಡ ಭರತ್ (55) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ತನ್ನ ಪತ್ನಿ ಹಾಗೂ ಹಿರಿಯ ಮಗಳು ನನ್ನ ವಿರುದ್ಧ ಅತ್ಯಾಚಾರ ಆರೋಪ ಮಾಡಿ ನಾನು ಜೈಲು ಸೇರುವಂತೆ ಮಾಡಿದ್ದರು. ನಾನು ಕೋರ್ಟ್ ನಲ್ಲಿ ಆರೋಪ ಮುಕ್ತನಾಗಿ ಹೊರಬಂದೆ. ಆದರೂ ಪತ್ನಿ ಹಾಗೂ ಮಗಳು ಇಬ್ಬರೂ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಭರತ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.

Home add -Advt

ಅಲ್ಲದೇ ದೇಶದಲ್ಲಿ ಅತ್ಯಾಚಾರ ಕುರಿತಾದ ಕಾನೂನುಗಳು ಬದಲಾಗಬೇಕು ಎಂದೂ ಪತ್ರದಲ್ಲಿ ಬರೆದಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button