Latest

ಸೇತುವೆ ಮೇಲೆ ಸೆಲ್ಫಿ; ಕಾಳಿ ನದಿ ಪಾಲಾದ ಪ್ರೇಮಿಗಳು

ಪ್ರಗತಿವಾಹಿನಿ ಸುದ್ದಿ; ಜೋಯಿಡಾ: ಸೆಲ್ಫಿಗಾಗಿ ಪ್ರೇಮಿಗಳಿಬ್ಬರು ಸೇತುವೆ ಮೇಲೆ ನಿಂತು ಪೋಸು ನೀಡಲು ಹೋಗಿ ಕಾಳಿ ನದಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಜೊಯಿಡಾ ತಾಲೂಕಿನ ಗಣೇಶ ಗುಡಿ ಬಳಿಯ ಸೂಪಾ ಡ್ಯಾಂ ಬಳಿ ನಡೆದಿದೆ.

ಗಣೇಶಗುಡಿಯ ಡ್ಯಾಮ್ ಕೆಳಭಾಗದ ಸೇತುವೆಯ ಕಟ್ಟೆಯ ಮೇಲೆ ನಿಂತು ಪ್ರೇಮಿಗಳು ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಈ ವೇಳೆ ಇಬ್ಬರೂ ಆಯ ತಪ್ಪಿ ಕಾಳಿ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ.

Home add -Advt

ಸ್ಥಳಕ್ಕೆ ರಾಮನಗರ ಪಿ.ಎಸ್.ಐ ಕಿರಣ ಪಾಟೀಲ ಹಾಗೂ ಜೊಯಿಡಾದ ಅಗ್ನಿಶಾಮಕ ಸಿಬ್ಬಂದಿ, ವೈಟ್ ವಾಟರ್ ರಾಪ್ಟಿಂಗ್ ತಂಡ ಭೇಟಿ ನೀಡಿ, ಇಬ್ಬರಿಗಾಗಿ ಇವರಿಗಾಗಿ ಹುಡುಕಾಟ ನಡೆಸಿದೆ. ಯುವತಿಯನ್ನು ಬೀದರ್ ಮೂಲದ ರಕ್ಷಿತಾ ಎಂದು ಗುರುತಿಸಲಾಗಿದ್ದು ಯುವಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಬೇಕಿದೆ.

Related Articles

Back to top button