ಪ್ರಗತಿವಾಹಿನಿ ಸುದ್ದಿ, ಕನ್ನೂರ್ – ನನಗೆ ಸೆಕ್ಸ್ ಗೆ ಮನೆಯಿಂದ ಹೊಗಬೇಕಿದೆ. ಹಾಗಾಗಿ ಅನುಮತಿ ಕೊಡಿ ಎಂದು ಬಂದ ಮೇಲೆ ನೋಡಿ ಕನ್ನೂರು ಠಾಣೆ ಪೊಲೀಸರು ತಲೆ ತಿರುಗಿ ಬೀಳುವುದೊಂದೇ ಬಾಕಿ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಅನುಮತಿ ಕೊರಿ ವ್ಯಕ್ತಿಯೋರ್ವ ಹೀಗೆ ಮೇಲ್ ಕಳಿಸಿದ್ದ.
ಇದೂ ಒಂದು ಎಸೆನ್ಶಿಯಲ್ ಸರ್ವೀಸ್ಸಾ? ಎಂದು ತಲೆ ಚಚ್ಚಿಕೊಂಡ ಪೊಲೀಸರು, ಮೇಲ್ ಕಳಿಸಿದ ವ್ಯಕ್ತಿಯನ್ನು ಹುಡುಕಿ ಠಾಣೆಗೆ ಕರೆ ತಂದರು.
ಮೇಲ್ ಕಳಿಸಿದ್ದ ವ್ಯಕ್ತಿಯೂ ನಾನೇನು ಅಂತಹ ತಪ್ಪು ಮಾಡಿದ್ದೇನೆ ಎಂದು ಕಕ್ಕಾಬಿಕ್ಕಿಯಾದ. ಠಾಣೆಗೆ ಬಂದ ವ್ಯಕ್ತಿಗೆ ಆತ ಕಳಿಸಿದ ಮೇಲ್ ತೋರಿಸಿದ ಪೊಲೀಸರು, ಒದ್ದು ಒಳಗೆ ಹಾಕಲು ತಯಾರಿ ನಡೆಸಿದರು. ತನ್ನದೇ ಮೇಲ್ ನೋಡಿದ ವ್ಯಕ್ತಿಯೂ ತಲೆ ತಿರುಗಿ ಬೀಳುವುದೊಂದು ಬಾಕಿ. ಸಿಕ್ಸ್ ಗೆ (6 ಗಂಟೆಗೆ) ಹೋಗಬೇಕು. ಅನುಮತಿ ಕೊಡಿ ಎಂದು ಬರೆಯುವ ಬದಲು ಆತ ಸೆಕ್ಸ್ ಗೆ ಹೋಗಬೇಕು ಎಂದು ಬರೆದಿದ್ದ.
ಆತನ ವಿವರಣೆ ಕೇಳಿದ ಪೊಲೀಸರು ನಗಬೇಕೋ ಅಳಬೇಕೋ ತಿಳಿಯದೆ ತಲೆ ಚಚ್ಚಿಕೊಂಡರು.
ಬೆಳಗಾವಿಯಲ್ಲಿ ಮತ್ತೊಮ್ಮೆ ಕೊರೋನಾ ದಾಖಲೆ; ರಾಜ್ಯದಲ್ಲಿ ಇಳಿಮುಖ, ಇಲ್ಲಿ ಮಹಾಸ್ಫೋಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ