Kannada NewsLatest

ಹಸಿದವರತ್ತ ನಮ್ಮ ಚಿತ್ತ; ಫುಡ್ ಕಿಟ್ ವಿತರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವವರಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ “ಹಸಿದವರತ್ತ ನಮ್ಮ ಚಿತ್ತ” ಎಂಬ ಕಾರ್ಯಕ್ರಮದಡಿ ಫುಡ್ ಕಿಟ್ ಗಳನ್ನು ವಿತರಿಸಲಾಯಿತು.

ಜಿಲ್ಲಾಧ್ಯಕ್ಷ ಆರ್. ಅಭಿಲಾಷ್ ಅವರ ನೇತೃತ್ವದಲ್ಲಿ ಸುಮಾರು 30 ರಿಂದ 40 ಕುಟುಂಬಗಳಿಗೆ ರೇಷನ್ ಕಿಟ್ ಹಂಚಲಾಯಿತು. ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ, ಇಂದಿನ ಪರಿಸ್ಥಿತಿಯಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂಬುದು ನಮ್ಮ ಉದ್ದೇಶ. ನಮ್ಮ ರಾಜ್ಯಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರು ಈ ಕಾರ್ಯಕ್ರಮ ಮಾಡಲು ನಮಗೆ ಸ್ಫೂರ್ತಿಯಾಗಿದ್ದು, ನಟರಾದ ಡಾಲಿ ಧನಂಜಯ ಹಾಗೂ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಾಗೂ ಯುವ ನಾಯಕ ಚನ್ನರಾಜ್ ಹಟ್ಟಿಹೊಳಿ ಅವರು ಸಹಕಾರ ನೀಡಿದ್ದಾರೆ. “ನೊಂದ ಎಲ್ಲಾ ಜೀವ, ನನ್ನೆದೆಂಬ ಭಾವ” ಎಂಬ ಘೋಷವಾಕ್ಯವನ್ನು ಮನಸಿನಲ್ಲಿ ಇಟ್ಟುಕೊಂಡು ಬಡವರ ಕಷ್ಟವನ್ನು ನೀಗಿಸುವ ಅಳಿಲು ಸೇವೆ ಶುರು ಮಾಡಿದ್ದೇನೆ.

Home add -Advt

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮರೇಶ್, ಜಿಲ್ಲಾ ಸಂಚಾಲಕರಾದ ವಿಶ್ವನಾಥ್ ಉಳ್ಳಾಗಡ್ಡಿ, ಜಿತೇಂದ್ರ ಗುಡ್ಡಕಾಯು,ವಿಶ್ವನಾಥ್ ಕೊರವಿ, ವಿನಾಯಕ್ ಕುಲಕರ್ಣಿ, ರಾಜು, ಗುರುಪಾದ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ?

Related Articles

Back to top button