Latest

ಶಿರಸಿಯಲ್ಲಿ 100.22ರೂಪಾಯಿ ತಲುಪಿದ ಲೀಟರ್ ಪೆಟ್ರೋಲ್ ದರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೇ ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ 100ರೂ ಗಡಿ ದಾಟಿದೆ. ಬಳ್ಳಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಶತಕದ ಗಡಿ ದಾಟಿದೆ.

ಬಳ್ಳಾರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 100.8 ರೂಪಾಯಿಯಾಗಿದ್ದರೆ ವಿಜಯನಗರ ಜಿಲ್ಲೆಯಲ್ಲಿ 99.45 ರೂಯಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಲೀಟರ್ ಪೆಟ್ರೋಲ್ ದರ 100.22 ರೂ ತಲುಪಿರುವುದು ಗ್ರಾಹಕರು ಕಂಗಾಲಾಗಿದ್ದಾರೆ.

Home add -Advt

ದೇಶದ ಹಲವು ಮಹಾನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ ನೂರರ ಗಡಿ ದಾಟಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 97.92 ರೂ ತಲುಪಿದೆ.
ನಾಯಕತ್ವ ಚರ್ಚೆ ಬಗ್ಗೆ ಅಂತ್ಯ ಹಾಡಬೇಕಿದೆ ಎಂದ ಆರ್.ಅಶೋಕ್

Related Articles

Back to top button