Kannada NewsKarnataka NewsLatest

ಶಾಸಕ ಸ್ಥಾನಕ್ಕೂ ರಮೇಶ ಜಾರಕಿಹೊಳಿ ರಾಜಿನಾಮೆ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸಿಡಿ ಪ್ರಕರಣ ಮತ್ತು ಇದರ ಹಿಂದೆ ನಂಬಿದವರಿಂದಲೇ ಮೋಸ ನಡೆದಿದೆ ಎನ್ನುವ ಕಾರಣಕ್ಕಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಖಾಸಗಿ ಟಿವಿ ವಾಹಿನಿಯೊಂದು ಸುದ್ದಿ ಬಿತ್ತರಿಸುತ್ತಿದೆ.

ಸಿಡಿ ಪ್ರಕರಣದಲ್ಲಿ ಸಿಲುಕಿ ರಮೇಶ ಜಾರಕಿಹೊಳಿ ತಮ್ಮ ಸಚಿವಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಂತರದ ದಿನಗಳಲ್ಲಿ, ತಾವೇ ಮುಂದೆ ನಿಂತು ಅಧಿಕಾರಕ್ಕೆ ತಂದ ಸರಕಾರ ತಮ್ಮ ನಿರೀಕ್ಷೆಗೆ ತಕ್ಕಂತೆ ಬೆಂಬಲಕ್ಕೆ ನಿಂತಿಲ್ಲ. ಮತ್ತು ಸ್ವ ಪಕ್ಷೀಯ ಮೂವರು ನಾಯಕರೇ ತಮಗೆ ಮೋಸ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ರಮೇಶ ಜಾರಕಿಹೊಳಿ ರಾಜಿನಾಮೆಗೆ ಮಂದಾಗಿದ್ದಾರೆ ಎಂದು ವರದಿ ಮಾಡಿದೆ.

Home add -Advt

ಇದೇ ಕಾರಣಕ್ಕೆ ರಮೇಶ ಜಾರಕಿಹೊಳಿ ಮುಂಬೈಗೆ ತೆರಳಿದ್ದು, ಅಲ್ಲಿ ರಾಜಿನಾಮೆ ಮತ್ತು ಮುಂದಿನ ತಂತ್ರಗಳನ್ನು ಹೆಣೆಯುತ್ತಿದ್ದಾರೆ ಎಂದು ವರದಿ ಮಾಡಿದೆ.

ಇದೊಂದು ಬೆದರಿಕೆ ತಂತ್ರವೇ ಅಥವಾ ಮತ್ತೇನಾದರೂ ರಾಜಕೀಯ ದಾಳ ಉರುಳಿಸಲಿದ್ದಾರಾ ಕಾದು ನೋಡಬೇಕಿದೆ.

ಬುಧವಾರ ರಮೇಶ ಜಾರಕಿಹೊಳಿ ರಾಜಿನಾಮೆ?; 20 ಸಾವಿರ ಕೋಟಿ ರೂ. ವಿವಾದದ ಸುತ್ತ….

ಒತ್ತಡಕ್ಕೆ ಮಣಿದ ರಮೇಶ್ ಜಾರಕಿಹೊಳಿ; ಸಚಿವ ಸ್ಥಾನಕ್ಕೆ ರಾಜಿನಾಮೆ

Related Articles

Back to top button