ಕೇವಲ 1500 ರೂ ಹಣದ ವ್ಯವಹಾರ, ಧಾಬಾ ಮಾಲೀಕನ ಮರ್ಡರ್
ಪ್ರಗತಿವಾಹಿನಿ ಸುದ್ದಿ, ಎಂ.ಕೆ.ಹುಬ್ಬಳ್ಳಿ – ಯಾರದ್ದೋ ಜಗಳ ಬಿಡಿಸಲು ಹೋದ ಹೊಟೆಲ್ ಉದ್ಯಮಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ.
ಹಣದ ವ್ಯವಹಾರಕ್ಕೆ ಸಮಂಧಿಸಿದಂತೆ ಇಬ್ಬರ ನಡುವೆ ನಡೆದ ಜಗಳ ಬಿಡಿಸಲು ಹೋದ ದಾಭಾ ಮಾಲೀಕನ ಮೇಲೆ ಹಲ್ಲೆ ನಡೆದಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.
ಘಟನೆ ಕಿತ್ತೂರು ತಾಲ್ಲೂಕಿನ ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಎಂ ಕೆ ಹುಬ್ಬಳ್ಳಿ ಗ್ರಾಮದ ಪಂಚವಟಿ ಧಾಭಾ ಮಾಲೀಕ ಪ್ರಕಾಶ ನಾಗನೂರು(38) ಮೃತಪಟ್ಟಿದ್ದು ನಿನ್ನೆ ಸಂಜೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
1500 ರೂ ಹಣದ ವ್ಯವಹಾರಕ್ಕೆ ಸಮಂಧಿಸಿದಂತೆ, ಯುವಕರ ಗುಂಪೊಂದು ಹಣ ಕೇಳಲು ಧಾಬಾಗೆ ಹೋಗಿದೆ ಈ ಸಂಧರ್ಭದಲ್ಲಿ ಗಲಾಟೆಯಾಗಿದೆ. ಯುವಕರ ಗುಂಪು ಧಾಬಾ ಮಾಲೀಕನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.
ಎರಡು ಗುಂಪುಗಳ ನಡೆವೆ ಮಾತಿನ ಚಕಮಕಿ ನಡೆದ ನಂತರ ಮಾರಾಮಾರಿ ನಡೆದಿದೆ.
ಜಗಳ ಬಿಡಿಸಲು ಮಧ್ಯ ಪ್ರವೇಶ ಮಾಡಿದ್ದ ಪ್ರಕಾಶ ನಾಗನೂರು ಎಂಬಾತನ ಮೇಲೆ,
ಯುವಕರ ಗುಂಪಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಯುವಕ ಕೆಲವೇ ಕ್ಷಣದಲ್ಲಿ ಕೊನೆಯುಸಿರೆಳೆದಿದ್ದಾನೆ.
ಸ್ಥಳಕ್ಕೆ ಕಿತ್ತೂರ ಪೋಲೀಸರು ದೌಡಾಯಿಸಿದ್ದು,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ