Latest

ಎಫ್ಐಆರ್ ದಾಖಲಾದರೂ ನಿಲ್ಲದ ಗೆಹನಾ ವಸಿಷ್ಠ ಅರೆನಗ್ನ ಫೋಟೋಶೂಟ್

ಪ್ರಗತಿವಾಹಿನಿ ಸುದ್ದಿ; ಮುಂಬೈ: ಅಶ್ಲೀಲ ವಿಡಿಯೋ ಚಿತ್ರೀಕರಣ ದಂಧೆಯಲ್ಲಿ ಭಾಗಿಯಾಗಿದ್ದ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಬಂಧನಕ್ಕೀಡಾಗಿ ಬಿಡುಗಡೆಯಾಗಿದ್ದ ನಟಿ ಗೆಹನಾ ವಸಿಷ್ಠ ಇದೀಗ ಮತ್ತೊಂದು ಅರೆನಗ್ನ ಫೋಟೋ ಶೂಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಅಶ್ಲೀಲ ಸಿನಿಮಾ ನಿರ್ಮಾಣ ದಂಧೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ರಾಜ್ ಕುಂದ್ರ ನಿರ್ಮಾಣದ ಕೆಲ ಹಾಟ್ ಶಾಟ್ಸ್ ಆಪ್ ಗಾಗಿ ತಾನೂ ಕೂಡ ಕೆಲ ಬೋಲ್ಡ್ ಸಿನಿಮಾಗಳಲ್ಲಿ ನಟಿಸಿದ್ದಾಗಿ ಗೆಹನಾ ಹೇಳಿಕೊಂಡಿದ್ದಳು. ಅಲ್ಲದೇ ರಾಜ್ ಕುಂದ್ರಾ ನಿರ್ಮಿಸಿದ್ದು, ಅಶ್ಲೀಲ ಅಥವಾ ನೀಲಿ ಚಿತ್ರಗಳಲ್ಲ ಎಂದು ಗೆಹನಾ ಹೇಳಿಕೆ ನೀಡಿದ್ದಳು.

ಅಶ್ಲೀಲ ವಿಡಿಯೋ ಚಿತ್ರೀಕರಣ ಅಪ್ ಲೋಡ್ ಪ್ರಕರಣ ಸಂಬಂಧ ಫೆಬ್ರವರಿಯಲ್ಲಿ ಬಂಧನಕ್ಕೀಡಾಗಿದ್ದ ಗೆಹನಾ ವಸಿಷ್ಠ ವಿರುದ್ಧ ಒಟ್ಟು ಮೂರು ಎಫ್ ಐ ಆರ್ ಕೂಡ ದಾಖಲಾಗಿವೆ. ಆದಾಗ್ಯೂ ಗೆಹನಾ ಮಾದಕತೆ ಫೋಟೋಶೂಟ್ ಗಳು ಮಾತ್ರ ನಿಂತಂತಿಲ್ಲ. ಜಾಮೀನಿನ ಮೇಲೆ ಹೊರಗಿರುವ ಗೆಹನಾ ಇದೀಗ ಮತ್ತೊಂದು ಅರೆನಗ್ನ ಫೋಟೋಗಳ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ.

ನಗ್ನ ಬೆನ್ನು ತೋರಿಸಿ ಕ್ಯಾಮರಾಗೆ ಪೋಸ್ ನೀಡಿರುವ ಮಾದಕ ಲುಕ್ ನ ಫೋಟೋವನ್ನು ಗೆಹನಾ ಇನ್ ಸ್ಟಾ ಗ್ರಾಂ ನಲ್ಲಿ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಲ್ಲಿ ಭಾರಿ ವೈರಲ್ ಆಗಿದೆ.

Home add -Advt

ಭೀಕರ ರಸ್ತೆ ಅಪಘಾತಕ್ಕೀಡಾದ ಮತ್ತೋರ್ವ ನಟ; ಪ್ರಜ್ಞಾಹೀತ ಸ್ಥಿತಿಯಲ್ಲಿ ಸಾಯಿ ಧರಮ ತೇಜ್

ವಿಚ್ಛೇದನ ವದಂತಿ ನಡುವೆಯೇ ಹಾಟ್ ಫೋಟೋಗಳ ಮೂಲಕ ಗಮನ ಸೆಳೆದ ಸಮಂತಾ

ಹಣದ ಆಮಿಷ ನೀಡಿದ್ದು ನಿಜ; ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಶಾಸಕ ಶ್ರೀಮಂತ ಪಾಟೀಲ್

Related Articles

Back to top button