Latest

ಎತ್ತಿನಗಾಡಿಯಿಂದ ಆಯತಪ್ಪಿ ಬಿದ್ದ ಕಾಂಗ್ರೆಸ್ ಶಾಸಕರು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಬೆಲೆ ಏರಿಕೆ ಖಂಡಿಸಿ ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ಬಂದ ಕಾಂಗ್ರೆಸ್ ನಾಯಕರು ಆಯತಪ್ಪಿ ಬಿದ್ದ ಘಟನೆ ವಿಧಾನಸೌಧದ ಗೇಟ್ ಬಳಿ ನಡೆದಿದೆ.

ಅಧಿವೇಶನಕ್ಕೆ ಎತ್ತಿನಗಾಡಿಗಳಲ್ಲಿ ಬಂದ ಕಾಂಗ್ರೆಸ್ ನಾಯಕರನ್ನು ವಿಧಾನಸೌಧದ ಗೇಟ್ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ನಡೆದಿದೆ. ವಿಧಾನಸೌಧದ ಆವರಣ ಪ್ರವೇಶಿಸಲು ಕಾಂಗ್ರೆಸ್ ನಾಯಕರ ಎತ್ತಿನಗಾಡಿಗಳಿಗೆ ನಿರಾಕರಿಸಲಾಗಿದೆ. ಈ ವೇಳೆ ಸ್ಥಳದಲ್ಲಿ ಗಲಾಟೆ ನಡೆದಿದೆ.

Home add -Advt

ಗಲಾಟೆಯಿಂದಾಗಿ ಎತ್ತುಗಳು ಬೆದರಿದ್ದು, ಕಾಂಗ್ರೆಸ್ ಶಾಸಕರಾದ ವೆಂಕಟರಮಣಯ್ಯ, ಸಂಗಮೇಶ್ ಸೇರಿದಂತೆ ಕಲ ಶಾಸಕರು ಎತ್ತಿನಗಾಡಿಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಎತ್ತಿನಗಾಡಿಯಲ್ಲಿದ್ದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಬ್ಬರಿಗೊಬ್ಬರು ಬೀಳದಂತೆ ಆಸರೆಯಾಗಿ ಕೈ ಕೈ ಹಿಡಿದುಕೊಂಡು ಬಚಾವಾಗಿದ್ದಾರೆ.

ಎತ್ತಿನಗಾಡಿ ರ್ಯಾಲಿಯಿಂದಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಎತ್ತಿನ ಗಾಡಿಯಲ್ಲಿ ಅಧಿವೇಶಕ್ಕೆ ಬಂದ ಕಾಂಗ್ರೆಸ್ ನಾಯಕರು

Related Articles

Back to top button