Latest

ನದಿಯಲ್ಲಿ ಮುಳುಗಿದ್ದ ಮಾನಸಿಕ ಅಸ್ವಸ್ಥ; ರಕ್ಷಿಸಲು ಹೋದ ಮೂವರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ನಾರಾಯಣಪುರ ಡ್ಯಾಂ ಹಿನ್ನೀರಿನಲ್ಲಿ ಮುಳುಗಿದ್ದ ಮಾನಸಿಕ ಅಸ್ವಸ್ಥರೊಬ್ಬರನ್ನು ರಕ್ಷಿಸಲೆಂದು ಹೋದ ಮೂವರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಧನ್ನೂರಿನಲ್ಲಿ ನಡೆದಿದೆ.

ಶಿವಪ್ಪ ಅಮಲೂರು ಎಂಬುವವರು ಮಾನಸಿಕವಾಗಿ ಅಸ್ವಸ್ಥರಾಗಿದ್ದರು, ನಾರಾಯಣಪುರ ಡ್ಯಾಂ ಹಿನ್ನೀರಿಗಿಳಿದಿದ್ದ ಅವರು, ನೀರಲ್ಲಿ ಮುಳುಗಿದ್ದರು ಎನ್ನಲಾಗಿದೆ. ಅವರ ರಕ್ಷಣೆಗೆಂದು ಶಿವಪ್ಪ ಮಗ ಯಮನಪ್ಪ ಹಾಗೂ ಅಳಿಯ ಶರಣಗೌಡ ಸೇರಿದಂತೆ 11 ಜನರು ಬೋಟ್ ನಲ್ಲಿ ತೆರಳಿದ್ದರು. ಈ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ್ದಾರೆ.

Home add -Advt

ಶಿವಪ್ಪ, ಶಿವಪ್ಪ ಪುತ್ರ ಯಮನಪ್ಪ, ಅಳಿಯ ಶಣಗೌಡ ಹಾಗೂ ಬೋಟ್ ಚಾಲಕ ಪರಶು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದ 8 ಜನರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಹನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾನಸಿಕ ಆರೋಗ್ಯ ಚರ್ಚೆಯನ್ನು ಮುಖ್ಯವಾಹಿನಿಗೆ ತರಲು ಸಿಎಂಆರ್ ಯು ವಿದ್ಯಾರ್ಥಿಗಳ ದಿಟ್ಟ ನಿರ್ಧಾರ

Related Articles

Back to top button