Latest

ವೇಶ್ಯಾವೃತ್ತಿಗೆ ಒಪ್ಪದ ಸಹೋದರಿಯನ್ನೇ ಕೊಂದ ಅಕ್ಕ

ಪ್ರಗತಿವಾಹಿನಿ ಸುದ್ದಿ; ರಾಂಚಿ: ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಳ್ಳಲು ಒಪ್ಪದ ಅಪ್ರಾಪ ಸಹೋದರಿಯನ್ನು ಅಕ್ಕನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ ನ ಸೋನಾರ್ ಬಳಿ ನಡೆದಿದೆ.

ನಾಪತ್ತೆಯಾಗಿದ್ದಾಳೆ ಎಂದು ಹೇಳಲಾಗಿದ್ದ 17 ವರ್ಷದ ಯುವತಿಯ ಶವ ಇದೀಗ ಜಾರ್ಖಂಡ್ ಸೋನಾರ್ ಅಣೆಕಟ್ಟೆ ಬಳಿ ಪತ್ತೆಯಾಗುವ ಮೂಲಕ ಅಕ್ಕನೇ ತಂಗಿಯನ್ನು ಹತ್ಯೆಗೈದ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಅಕ್ಕಂದಿರಾದ ರಾಖಿ ದೇವಿ (30), ರೂಪಾ ದೇವಿ (25) ಭಾವ ಧನಂಜಯ ಅಗರ್ವಾಲ್, ಪ್ರತಾಪ್ ಕುಮಾರ್ ಹಾಗೂ ನಿತೀಶ್ ಎಂಬ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತ ಸಹೋದರಿಯನ್ನು ಅಕ್ಕ ರಾಖಿ ಹಾಗೂ ಭಾವ ಧನಂಜಯ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳುವಂತೆ ಒತ್ತಾಯಿಸಿದ್ದರು. ಆದರೆ ಇದಕ್ಕೆ ಮೃತ ಸಹೋದರಿ ಒಪ್ಪಿರಲಿಲ್ಲ. ತಾನು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು, ಆತನನ್ನೇ ವಿವಾಹವಾಗುವುದಾಗಿ ಹೇಳುತ್ತಿದ್ದಳು. ಇದಕ್ಕೆ ರಾಖಿ ಹಾಗೂ ರೂಪಾ ಒಪ್ಪಿರಲಿಲ್ಲ. ಅಕ್ಕ ರಾಖಿ ತನ್ನ ಪರಿಚಯದವರಾದ ಪ್ರತಾಪ್ ಹಾಗೂ ನಿತೀಶ್ ಅವರನ್ನು ಮನೆಗೆ ಕರೆತಂದು ಅಪ್ರಾಪ್ತ ಸಹೋದರಿಗೆ ವೇಶ್ಯಾವೃತ್ತಿಗೆ ಒತ್ತಾಯಿಸಿದ್ದಳು ಎನ್ನಲಾಗಿದೆ. ಸಹೋದರಿ ಒಪ್ಪದಿದ್ದಾಗ ಆಕೆಯನ್ನು ಹತ್ಯೆಗೈದು ಬಳಿಕ ಮೃತದೇಹವನ್ನು ಸೋನಾರ್ ಅಣೆಕಟ್ಟೆ ಬಳಿ ಬಿಸಾಕಿ ಹೋಗಿದ್ದರು.

ಕೃತ್ಯದ ಬಳಿಕ ತನ್ನ ಸಹೋದರಿ ನಾಪತ್ತೆಯಾಗಿದ್ದಾಗಿ ದೂರು ದಾಖಲಿಸಿದ್ದಳು. ತನಿಖೆ ನಡೆಸಿದ ಪೊಲೀಸರಿಗೆ ಸೋನಾರ್ ಅಣೆಕಟ್ಟೆ ಬಳಿ ಯುವತಿ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಮಾಡಿರುವುದು ಸಾಬೀತಾಗಿತ್ತು. ದೂರು ದಾರರ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಸಿಡಿಪಿಒ ವಿಜಯ್ ಶಂಕರ್ ಮಾಹಿತಿ ನೀಡಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button