Latest

ಮುಂದುವರೆದ ಪುನೀತ್ ಅಭಿಮಾನಿಗಳ ಆತ್ಮಹತ್ಯೆ ಸರಣಿ

ಪ್ರಗತಿವಾಹಿನಿ ಸುದ್ದಿ; ರಾಮನಗರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಮರಣ ಕೋಟ್ಯಂತರ ಅಭಿಮಾನಿಗಳನ್ನು, ಭಾರತೀಯ ಚಿತ್ರರಂಗವನ್ನೇ ಆಘಾತಕ್ಕೀಡುಮಾಡಿದೆ. ನೆಚ್ಚಿನ ನಟನನ್ನು ಕಳೆದುಕೊಂಡು ದು:ಖಿತರಾಗಿರುವ ಅಭಿಮಾನಿಗಳು ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವುದು ಮತ್ತೊಂದು ದುರಂತ.

ಪುನೀತ್ ರಾಜ್ ಕುಮಾರ್ ಸಾವಿನಿಂದ ನೊಂದ ಮತ್ತೋರ್ವ ಅಭಿಮಾನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನಪಟ್ಟಣದಲ್ಲಿ ನಡೆದಿದೆ. ಎಲೆಕೇರಿಯ ವೆಂಕಟೇಶ್ (26) ಆತ್ಮಹತ್ಯೆಗೆ ಶರಣಾದ ಅಭಿಮಾನಿ.

Home add -Advt

ವೆಂಕಟೇಶ್, ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಸಾವಿನ ಸುದ್ದಿಕೇಳಿ ಶಾಕ್ ಗೊಳಗಾಗಿ ಊಟ ಬಿಟ್ಟಿದ್ದರಂತೆ. ಕೊನೆ ಪಕ್ಷ ಪುನೀತ್ ಸಮಾಧಿಯನ್ನಾದರೂ ನೋಡಬೇಕು ಎಂದು ಹೇಳುತ್ತಿದ್ದರಂತೆ. ಆದರೆ ಇದೀಗ ವೆಂಕಟೇಶ್ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದವರು ಆಘಾತಕ್ಕೀಡಾಗಿದ್ದಾರೆ.

ಚೆನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3 ತಿಂಗಳ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ

Related Articles

Back to top button