Latest

ಸಿವಿಲ್ ಸರ್ವೀಸ್ ಪರೀಕ್ಷೆ ಫಲಿತಾಂಶ ಪ್ರಕಟ: 759 ಅಭ್ಯರ್ಥಿಗಳು ಆಯ್ಕೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಕೇಂದ್ರ ಲೋಕಸೇವಾ ಆಯೋಗ 2018ರ ಜೂನ್ ನಲ್ಲಿ ನಡೆಸಿದ್ದ ಪ್ರಾಥಮಿಕ ಪರೀಕ್ಷೆ ಹಾಗೂ ಸೆಪ್ಟಂಬರ್ ನಲ್ಲಿ ನಡೆಸಿದ್ದ ಮುಖ್ಯಪರೀಕ್ಷೆಯ  ಫಲಿತಾಂಶ ಹೊರಬಿದ್ದಿದ್ದು, ಒಟ್ಟೂ 759 ಜನರು ಉತ್ತೀರ್ಣರಾಗಿದ್ದಾರೆ. 

ಅರ್ಜಿ ಸಲ್ಲಿಸಿದ್ದ 10 ಲಕ್ಷ ಅಭ್ಯರ್ಥಿಗಳ ಪೈಕಿ, 5 ಲಕ್ಷ ಜನ ಪ್ರಾಥಮಿಕ ಪರೀಕ್ಷೆ ಬರೆದಿದ್ದರು. ಅವರಲ್ಲಿ 10,468 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆದಿದ್ದರು. ಆ ಪೈಕಿ 1994 ಜನರು ಸಂದರ್ಶನಕ್ಕೆ ಹಾತರಾಗಿದ್ದರು. ಅಂತಿಮವಾಗಿ 759 ಜನರು ಉತ್ತೀರ್ಣರಾಗಿದ್ದಾರೆ.

ಒಟ್ಟು 759 ಅಭ್ಯರ್ಥಿಗಳಲ್ಲಿ 577 ಪುರುಷರು ಹಾಗೂ 182 ಮಹಿಳೆಯರನ್ನು ಭಾರತೀಯ ಆಡಳಿತಾತ್ಮಕ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಕೇಂದ್ರೀಯ ಸೇವೆಯ ಗ್ರೂಪ್ A ಹಾಗೂ ಗ್ರೂಪ್ B ಹುದ್ದೆಗಳಿಗೆ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ.

 ಐಐಟಿ ಬಾಂಬೆಯ ಬಿ.ಟೆಕ್., ಪದವೀಧರ, ಪರಿಶಿಷ್ಟ ಜಾತಿಗೆ ಸೇರಿದ ಕನಿಷ್ಕ ಕಟಾರಿಯಾ ಮೊದಲ ಸ್ಥಾನ ಪಡೆದಿದ್ದಾರೆ. ಗಣಿತವನ್ನು ಮುಖ್ಯ ವಿಷಯವನ್ನಾಗಿ ಆರಿಸಿಕೊಂಡು ಅವರು ಪರೀಕ್ಷೆ ಬರೆದಿದ್ದರು. 

ಮಹಿಳೆಯರಲ್ಲಿ ಸೃಷ್ಟಿ ಜಯಂತ್ ದೇಶ್ ಮುಖ್ ಟಾಪರ್ ಆಗಿದ್ದಾರೆ. ಅವರು ಒಟ್ಟಾರೆ ಐದನೇ ಸ್ಥಾನ ಪಡೆದಿದ್ದಾರೆ. ಅವರು ಭೋಪಾಲ್ ನಲ್ಲಿನ ರಾಜೀವ್ ಗಾಂಧಿ ಪ್ರೌದ್ಯೋಗಿಕಿ ವಿಶ್ವವಿದ್ಯಾಲಯದಿಂದ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಮೊದಲ ಟಾಪ್ ಇಪ್ಪತ್ತೈದು ಅಭ್ಯರ್ಥಿಗಳಲ್ಲಿ ಹದಿನೈದು ಪುರುಷರು ಹಾಗೂ ಹತ್ತು ಮಹಿಳೆಯರಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button