Latest

ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಕೇಸ್; ಪಿಎಫ್ಐ ಪದಾಧಿಕಾರಿ ಬಂಧನ

ಪ್ರಗತಿವಾಹಿನಿ ಸುದ್ದಿ; ಪಾಲಕ್ಕಾಡ್: ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ ಎಫ್ ಐ) ಸ್ಥಲೀಯ ಪದಾಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಾಲಕ್ಕಾಡ್ ನ ಕಿನಾಸ್ಸೆರಿಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಸಂಜಿತ್ (27) ನನ್ನು ಪತ್ನಿಯ ಎದುರೇ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆಗೈದಿದ್ದರು. ಈ ಪ್ರಕರಣ ಸಂಬಂಧ ಇದೀಗ ಪಿಎಫ್ ಐ ಕಾರ್ಯಕರ್ತನೋರ್ವನನ್ನು ಬಂಧಿಸಲಾಗಿದೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿಶ್ವನಾಥ್ ಮಾತನಾಡಿ, ಬಂಧಿತ ಪಿಎಫ್ ಐ ಸ್ಥಳೀಯ ಮುಖಂಡ ನೇರವಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಇನ್ನೂ ಇಬ್ಬರು ಯುವಕರು ಪೊಲೀಸರ ವಶದಲ್ಲಿದ್ದಾರೆ. ಕೊಟ್ಟಾಯಂನ ಮುಂಡಕ್ಕಯಂ ಹಾಗೂ ಪಾಲಕ್ಕಾಡ್ ನ ನೆಮ್ಮಾರದ ಇಬ್ಬರನ್ನು ಬಂಧಿಸಲಾಗಿದೆ. ಕೆಲ ಶಂಕಿತರ ವಿಚಾರಣೆ ನಡೆದಿದೆ ಎಂದು ತಿಳಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಸ್ಫೋಟ; ಚಹಾ ಮಾಡುತ್ತಿದ್ದ ಮಹಿಳೆ ದುರಂತ ಅಂತ್ಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button