ಲಖನ್ ಜಾರಕಿಹೊಳಿ ಸ್ಪರ್ಧೆ: ಆಖಾಡಕ್ಕಿಳಿದ ಸಿಎಂ ಬೊಮ್ಮಾಯಿ (CM ಹೇಳಿಕೆ ವೀಡಿಯೋ ನೋಡಿ)
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ವಿಧಾನಪರಿಷತ್ ಕಣಕ್ಕೆ ಲಖನ್ ಜಾರಕಿಹೊಳಿ ಸ್ಪರ್ಧೆಯ ಹಿನ್ನೆಲೆಯಲ್ಲಿ ಅವರ ಸಹೋದರರಾಗಿ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಇಬ್ಬರ ಜೊತೆಗೂ ಮಾತನಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲಖನ್ ಸ್ಪರ್ಧೆಯಿಂದ ಏನೇನು ಬೆಳವಣಿಗೆಗಳಾಗಬಹುದು ಎನ್ನುವ ಕುರಿತು ಚರ್ಚಿಸುತ್ತೇನೆ ಎಂದರು.
ಎ.ಮಂಜು ಅವರ ಪ್ರಕರಣಕ್ಕೂ ರಮೇಶ ಜಾರಕಿಹೊಳಿಗೂ ಹೋಲಿಕೆ ಮಾಡುವುದು ಸರಿಯಲ್ಲ. ರಮೇಶ ಸಹೋದರ ಲಖನ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ತಾವು ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ರಮೇಶ ಮತ್ತು ಬಾಲಚಂದ್ರ ಈಗಾಗಲೆ ತಿಳಿಸಿದ್ದಾರೆ. ಆದಾಗ್ಯೂ ಇಂದು ಮತ್ತೊಮ್ಮೆ ಈ ಬಗ್ಗೆ ರಮೇಶ್ ಮತ್ತು ಬಾಲಚಂದ್ರ ಜೊತೆ ಚರ್ಚಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.
ನಾಮಪತ್ರ ವಾಹಸ್ ಪಡೆಯುವುದು ಲಖನ್ ಗೆ ಬಿಟ್ಟ ವಿಚಾರ. ಅವರ ಪಕ್ಷೇತರರಾಗಿದ್ದಾರೆ. ಅವರಿಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಪಕ್ಷದಲ್ಲಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಅಲ್ಲಿ ಗೆಲ್ಲಲಿದ್ದಾರೆ ಎಂದು ತಿಳಿಸಿದರು.
ನಾಮಪತ್ರ ಹಿಂಪಡೀತಾರಾ ಲಖನ್? ಸಾಧ್ಯತೆ ಇದೆ – ಸತೀಶ್, ಪ್ರಶ್ನೆಯೇ ಇಲ್ಲ – ಲಖನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ