Latest

ಪಾಗಲ್ ಪ್ರೇಮಿಯ ಹುಸಿ ಕರೆಗೆ ಯುವತಿ ಬಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಾಗಲ್ ಪ್ರೇಮಿ ಯುವತಿಯೊಬ್ಬಳಿಗೆ ಕರೆ ಮಾಡಿ ಬೆದರಿಕೆಯೊಡ್ಡಿದ ಪರಿಣಾಮ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ದೊಡ್ಡಬಿದರಕಲ್ಲು ಬಳಿಯ ಮನೆಯಲ್ಲಿ ನಡೆದಿದೆ.

ಸಾಕ್ಷಿ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪ್ರೀತಿಸು, ಮದುವೆಯಾಗು ಎಂದು ಪಾಗಲ್ ಪ್ರೇಮಿ ಅರುಣ್ ಸಾಕ್ಷಿಗೆ ಪೀಡಿಸುತ್ತಿದ್ದ. ಇದಕ್ಕೆ ಸಾಕ್ಷಿ ನಿರಾಕರಿಸಿದ್ದಳು ಎನ್ನಲಾಗಿದೆ.

Home add -Advt

ಸಾಕ್ಷಿಯ ಮಾವ ಪ್ರಜ್ವಲ್ ಎಂಬುವವರಿಗೆ ಅರುಣ್ ತನ್ನ ಸ್ನೇಹಿತ ಗೋಪಾಲ್ ಎಂಬಾತನಿಂದ ನಕಲಿ ಪೊಲೀಸ್ ಹೆಸರಲ್ಲಿ ಕರೆ ಮಾಡಿಸಿದ್ದ. ಬಸವೇಶ್ವರ ನಗರ ಪೊಲೀಸ್ ಠಾಣೆಯಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದ. ಅರುಣ್ ಸಾಕ್ಷಿ ಹೆಸರು ಹೇಳಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಬೆದರಿಸಿದ್ದ.

ಕರೆ ಮಾಡಿದ್ದು ನಿಜವಾದ ಪೊಲೀಸರು ಎಂದು ಹೆದರಿದ ಸಾಕ್ಷಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಯುವತಿಯ ಜೀವ ಬಲಿಯಾಗಿದೆ.
ನಂದಿನಿ ಬ್ರ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ ಜಾಲ

Related Articles

Back to top button