Kannada NewsLatest

ಪ್ರಕೃತಿ ಮಡಿಲಲ್ಲಿ ಅರ್ಥಪೂರ್ಣ ಸಂಕ್ರಾಂತಿ ಆಚರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಎರಡು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಡಲದ ಸದಸ್ಯರಾದ ಅನಿತಾ ಜಕ್ಕಣ್ಣವರ್‌ ಅವರ ತೋಟದ ಮನೆಯಲ್ಲಿ ಪ್ರಕೃತಿಯ ಮಡಿಲಲ್ಲಿ ಅರ್ಥಪೂರ್ಣವಾಗಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು.

ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಎಲ್ಲ ಆಚರಣೆಗಳನ್ನು ಆಚರಿಸಿ ರಾಶಿ ಪೂಜೆಯನ್ನು ಮಾಡಿ ಸುಗ್ಗಿ ಸಂಭ್ರಮವನ್ನು ಆಚರಿಸಿದ ತರಹೇವಾರಿ ಹಬ್ಬದೂಟವನ್ನು ಸವಿದು ಸದಸ್ಯರಿಗೆ ಅರಿಶಿನ-ಕುಂಕುಮ ಉಡಿಯನ್ನುತುಂಬಲಾಯಿತು. ಈ ಸಂದರ್ಭದಲ್ಲಿ ಉಮಾ ಸಂಗೀತ ಪ್ರತಿಷ್ಠಾನ ಸಂಚಾಲಕಿ ಹಾಗೂ ಮಂಡಳದ ಅಧ್ಯಕ್ಷೆ ಮಂಗಲ್‌ರಾಜೇಂದ್ರ ಮಠದ ಅವರು ಎಲ್ಲರನ್ನೂ ಸ್ವಾಗತಿಸಿದರು.

Home add -Advt

ಮಂಡಳದ ಕಾರ್ಯದರ್ಶಿಯಾದ ರತ್ನಶ್ರೀ ಗುಡೇರ್‌ ಅವರು ಮಂಡಲವನ್ನು ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೀತಿ ಕಲ್ಯಾಣಶೆಟ್ಟಿ ನಿರೂಪಿಸಿದರು. ರಾಣಿಜಂತಿ ಪ್ರಾರ್ಥಿಸಿದರು ಹಾಗೂ ಪುಷ್ಪಾಜೀರಿಗೆ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿಡಾ. ರಾಜೇಂದ್ರ ಮಠದ್ ಹಾಗೂ ಡಾ. ಗುಡಗನಟ್ಟಿಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರಗನ್ನು ನೀಡಿದರು.
ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ

Related Articles

Back to top button