Latest

ಪತಿಯನ್ನೇ ಹರಾಜಿಗಿಟ್ಟ ಮಹಿಳೆ ; No Return, No Exchange

ಪ್ರಗತಿವಾಹಿನಿ ಸುದ್ದಿ; ಐರಿಷ್: ಪತ್ನಿಯೋರ್ವಳು ತನ್ನ ಪತಿಯನ್ನೇ ಹರಾಜಿಗಿಟ್ಟ ಘಟನೆ ಐರಿಷ್ ನಲ್ಲಿ ಬೆಳಕಿಗೆ ಬಂದಿದೆ.

ಪತಿ ತನ್ನನ್ನು ಹಾಗೂ ತನ್ನ ಇಬ್ಬರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಮೀನುಗಾರಿಕೆಗೆ ತೆರಳಿದ್ದಕ್ಕೆ ಮಹಿಳೆ, ವೆಬ್ ಸೈಟ್ ಒಂದರಲ್ಲಿ ಪತಿಯನ್ನು ಮಾರಾಟಕ್ಕಿಟ್ಟಿದ್ದಾರೆ. ವಾಪಸ್ ಅಥವಾ ಬದಲಾವಣೆ ಇಲ್ಲ (No Return, No Exchange) ಎಂದು ಬರೆದುಕೊಂಡಿದ್ದಾಳೆ.

37 ವರ್ಷದ ಪತಿ ಜಾನ್ ಮೆಕ್ ಅಲಿಸ್ಟರ್ ನನ್ನು ಟ್ರೆಡ್ ಮಿ ವೆಬ್ ಸೈಟ್ ನಲ್ಲಿ ಮಾರಾಟಕ್ಕಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಜಾನ್ 6 ಅಡಿ ಒಂದು ಇಂಚು ಎತ್ತರವಿದ್ದು, ವಯಸ್ಸು 37. ಮೀನುಗಾರಿಕೆ ಹಾಗೂ ಬೇಟೆಯಲ್ಲಿ ಪರಿಣತಿ ಹೊಂದಿದ್ದು, ಆಹಾರ ಮತ್ತು ನೀರನ್ನು ನೀಡಿದರೆ ಸಾಕು. ಆತನಿಗೆ ಕೆಲ ಮನೆ ಕೆಲಸಗಳನ್ನೂ ಕಲಿಸುವ ಅಗತ್ಯವಿದೆ. ಅದನ್ನು ಕಲಿಸುವಷ್ಟು ತಾಳ್ಮೆಯಾಗಲಿ, ಸಮಯವಾಗಲಿ ನನಗಿಲ್ಲ. ಹಾಗಾಗಿ ಆತನನ್ನು ಹರಾಜಿಗಿಟ್ಟಿದ್ದೇನೆ ಎಂದು ಮಹಿಳೆ ತಿಳಿಸಿದ್ದಾರೆ.

ಅತಿಯಾದ ಮೀನುಗಾರಿಕೆಗೆ ಬೇಸತ್ತು ಹೋಗಿದ್ದು, ಮೀನುಗಾರಿಕೆ ಕೆಟ್ಟದ್ದಲ್ಲ, ಆದರೆ ರಜಾ ದಿನಗಳಲ್ಲೂ ನನ್ನನ್ನು ಹಾಗೂ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಲ್ಲದೇ, ಮಧ್ಯರಾತ್ರಿ ಮನೆಗೆ ಬರುವ ಅಭ್ಯಾಸ ನನ್ನ ತಾಳ್ಮೆ ಕೆಡಿಸಿದೆ. ಹೀಗಾಗಿ ಗಂಡನನ್ನು ಹರಾಜಿಗೆ ಇಟ್ಟಿದ್ದೇನೆ. ಇದರಲ್ಲಿ ಬದಲಾವಣೆ ಇಲ್ಲ ಎಂದಿದ್ದಾರೆ ಎಂದು ವರದಿ ತಿಳಿಸಿದೆ.

ಕಾಲುವೆಗೆ ಬಿದ್ದ ಕಾರು; ಪತ್ನಿ ದುರ್ಮರಣ; ಸ್ವಲ್ಪದರಲ್ಲಿ ಬಚಾವ್ ಆದ ಪತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button