Latest

ಕಾಶ್ಮೀರ ಕಣಿವೆಯಲ್ಲಿ ಬಸಿದ ನೆತ್ತರು, ಉಗ್ರರಿಂದ ಗ್ರೆನೇಡ್ ದಾಳಿ

ಪ್ರಗತಿ ವಾಹಿನಿ ಸುದ್ದಿ ಶ್ರೀನಗರ: ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಉಗ್ರರ ಗ್ರೆನೇಡ್ ದಾಳಿಗೆ ಓರ್ವ ಪೊಲೀಸ್ ಬಲಿಯಾಗಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಸಂಜೆ ಬಿಎಸ್‌ಎಫ್ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ಗ್ರೆನೇಡ್ ಎಸೆದಿದ್ದು ಪೊಲೀಸ್ ಜುಬೇರ್ ಅಹಮ್ಮದ್ ಎಂಬ ಪೊಲೀಸ್ ಮೃತಪಟ್ಟಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆಯ ವಕ್ತಾರ, ಗ್ರೆನೇಡ್ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾರೆ. ಬಂಡಿಪೋರಾ ಜಿಲ್ಲೆಯ ನಿಶಾತ್ಗ್ ಪಾರ್ಕ್ ಬಳಿ ಬಿಎಸ್‌ಎಫ್ ಯೋಧರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಉಗ್ರರು ಗ್ರೆನೇಡ್ ಎಸೆದಿದ್ದಾರೆ. ಅಲ್ಲದೇ ಗುಂಡಿನ ದಾಳಿ ಸಹ ನಡೆಸಿದ್ದಾರೆ. ಗ್ರೆನೇಡ್ ಸ್ಪೋಟದಿಂದ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು ಗಾಯಗೊಂಡ ನಾಲ್ವರು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ.

Home add -Advt

ರೈತನ ಖಾತೆಗೆ ಬಿತ್ತು 15 ಲಕ್ಷ, ಮೋದಿ ಹಾಕಿದ್ದಾರೆಂದು ತಿಳಿದು ಮನೆ ಕಟ್ಟಿಸಿದ ಮುಗ್ಧ !

Related Articles

Back to top button