Latest

ಯುವತಿಗೆ ಮುತ್ತು ಕೊಟ್ಟವನಿಗೆ 1 ವರ್ಷ ಜೈಲು ಶಿಕ್ಷೆ

ಪ್ರಗತಿವಾಹಿನಿ ಸುದ್ದಿ; ಪಣಜಿ: ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಮುತ್ತುಕೊಟ್ಟ ಆರೋಪಿಗೆ 1 ವರ್ಷ ಜೈಲು ಶಿಕ್ಷೆ 10 ಸಾವಿರ ರೂಪಾಯಿ ದಂಡ ವಿಧಿಸಿ ಗೋವಾದ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ.

2015ರಲ್ಲಿ ನಡೆದಿದ್ದ ಈ ಪ್ರಕರಣದ ತೀರ್ಪು ಈಗ ಹೊರಬಿದ್ದಿದ್ದು, ಇಂತಹ ಪ್ರಕರಣಗಳು ಹೆಣ್ಣಿನ ಘನತೆಗೆ ಕುತ್ತು ತರುವಂತದ್ದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಆದರೆ ಆರೋಪಿ ತನ್ನ ಹಿಂದಿನ ಪ್ರಯಾಣಿಕರು ತನ್ನನ್ನು ತಳ್ಳಿದರು. ಈ ವೇಳೆ ನಾನು ಯುವತಿಯ ಮೇಲೆ ಬಿದ್ದೆ. ಆಗ ತುಟಿ ಆಕೆಯ ಕೆನ್ನೆಗೆ ತಾಗಿದೆ ಹೊರತು ಉದ್ದೇಶಪೂರ್ವಕವಾಗಿ ಮುತ್ತುಕೊಟ್ಟಿಲ್ಲ ಎಂದು ವಾದಿಸಿದ್ದ.

ಇದಕ್ಕೆ ಯುವತಿ, ಆರೋಪಿ ರೈಲು ಹತ್ತಿದಾಗಿನಿಂದ ಅನುಚಿತವಾಗಿ ವರ್ತಿಸಿದ್ದ ನಿಲ್ದಾಣದಲ್ಲಿ ಇಳಿಯುವ ವೇಳೆ ಆತ ಮುತ್ತುಕೊಟ್ಟಿದ್ದಾನೆ ಎಂದು ವಾದಿಸಿದ್ದಳು. ವಾದ-ವಿವಾದ ಆಲಿಸಿದ ಕೋರ್ಟ್ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಹೇಗಿದೆ ಇಂದು ಚಿನ್ನ ಬೆಳ್ಳಿ ದರ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button