Latest

ವಾಹನ ಚಾಲನೆ ವೇಳೆಯೇ ಮೂರ್ಛೆ ಹೋದ ಟೆಂಪೋ ಚಾಲಕ; ಮುಂದೇನಾಯ್ತು?

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಟೆಂಪೋ ಟ್ರಾವಲರ್ ಚಾಲಕ ಏಕಾಏಕಿ ಮೂರ್ಛೆ ಹೋದ ಪರಿಣಾಮ ಟೆಂಪೋ ಟ್ರಾವಲರ್ ಅಪಘಾತಕ್ಕೀಡಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ.

ಟೆಂಪೋಚಾಲಕನಿಗೆ ವಾಹನ ಚಲಾಯಿಸುತ್ತಿದ್ದಾಗಲೇ ಮೂರ್ಛೆ ರೋಗ ಕಾಣಿಸಿಕೊಂಡಿದ್ದು, ಚಾಲಕ ಮೂರ್ಛೆ ಹೋಗುತ್ತಿದ್ದಂತೆ ಟೆಂಪೋ ರಸ್ತೆಬದಿಯ ದಿಬ್ಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

Home add -Advt

ಬೆಂಗಳೂರಿನ ಬಿಡದಿ ಮೂಲದ 10 ಮಂದಿ ಪ್ರವಾಸಿಗರು ಸಿಗಂದೂರು ಚೌಡೇಶ್ವರಿ ದೇವಿ ದರ್ಶನಕ್ಕೆ ಆಗಮಿಸಿದ್ದರು. ದರ್ಶನ ಪಡೆದು ವಾಪಸ್ ತೆರಳುತ್ತಿದ್ದ ವೇಳೆ ಕಳಸವಳ್ಳಿ ಬಳಿ ಈ ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ಬಾಬು, ಸುಚಿತ್ರಾ, ಡಿಂಪಾ, ಸಂಚಿತ, ಗುತ್ಯಮ್ಮ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಾಗರ ಉಪವಿಭಾಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ಪಾಸ್: ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

Related Articles

Back to top button