Kannada NewsLatest

ಬೆಳಗಾವಿ: ಮತ್ತೊಂದು ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಟ್ರಕ್ ಹಾಗೂ ಕಾರು ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ನಿಪ್ಪಾಣಿ ಹೊರವಲಯದಲ್ಲಿ ನಡೆದಿದೆ.

ನಿಪ್ಪಾಣಿ ಹೊರವಲಯದ ಸ್ಥವನಿಧಿ ಘಾಟ್ ನಲ್ಲಿ ಟ್ರಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Home add -Advt

ಕಾರಿನಲ್ಲಿದ್ದ ಅದಗೊಂಡು ಬಾಬು (60), ಪತ್ನಿ ಛಾಯಾ (55), ಚಂಪಾತಾಯಿ ಮಗದುಮ್ (80) ಹಾಗೂ ಮಹೇಶ್ ಪಾಟೀಲ್ (23) ಮೃತರು.

ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಬೆಳಗಾವಿ; ಮದುವೆ ಮೆರವಣಿಗೆ ವೇಳೆ ಎಂಇಎಸ್ ದಾಂಧಲೆ

Related Articles

Back to top button