Kannada NewsLatest

ಕರ್ನಾಟಕ ಯುವ ನೀತಿ ಕರಡು: ನಾಳೆ ವಿಭಾಗಮಟ್ಟದ ಅಭಿಪ್ರಾಯ ಸಂಗ್ರಹ ಸಭೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ಯುವ ನೀತಿ-2021(ಕರಡು) ಅಂತಿಮಗೊಳಿಸುವುದಕ್ಕಾಗಿ ಅಭಿಪ್ರಾಯಗಳ ಸಂಗ್ರಹಕ್ಕಾಗಿ ಸೋಮವಾರ(ಮೇ 30) ಬೆಳಿಗ್ಗೆ 10 ಗಂಟೆಯಿಂದ ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ವಿಭಾಗಮಟ್ಟದ ಸಭೆಯನ್ನು ಏರ್ಪಡಿಸಲಾಗಿದೆ.

ಈ ಸಭೆಯಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳ ತಜ್ಞರು, ಯುವಜನರು, ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿಗಳು ಹಾಗೂ ಆಯ್ದ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

Home add -Advt

ಪ್ರಾದೇಶಿಕ ಆಯುಕ್ತರ ಪರವಾಗಿ ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ. ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಸದರಿ ಸಭೆಯಲ್ಲಿ ಕರ್ನಾಟಕ ಯುವ ನೀತಿ-2021(ಕರಡು) ಅಂತಿಮಗೊಳಿಸುವುದಕ್ಕಾಗಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ಯುವಜನಸೇವಾ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಬಸವರಾಜ ಮಿಲ್ಲಾನಟ್ಟಿ ಅವರು ತಿಳಿಸಿದ್ದಾರೆ.
ರಾಜ್ಯಸಭಾ ಚುನಾವಣೆ: ಬಿಜೆಪಿಯಿಂದ ನಟ ಜಗ್ಗೇಶ್, ನಿರ್ಮಲಾ ಸೀತಾರಮನ್ ಗೆ ಟಿಕೆಟ್

Related Articles

Back to top button