Latest

ಭೀಕರ ಸರಣಿ ಅಪಘಾತ; ವಿದ್ಯಾರ್ಥಿಗಳು ಸೇರಿ ಸ್ಥಳದಲ್ಲೇ ಐವರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಜೈಪುರ: ಕಂಟೇನರ್ ಟ್ರಕ್ ಕಾರು, ಬೈಕಿಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಗಳು ಸೇರಿ ಐವರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಜಲಾವರ್ ನ ಅಕೋಡಿಯಾ ಗ್ರಾಮದಲ್ಲಿ ನಡೆದಿದೆ.

ಬಲರಾಮ್ ಸೇನ್ (55), ದುರ್ಗಾ ಸಿಂಗ್ (45), ನಿತೇಶ್ ಪರೇಟಾ (22) ಮನೀಶ್ ಪರೇಟಾ (20) ಹಾಗೂ ಸೋನು ಪರೇಟಾ (20) ಮೃತರು. ಎಲ್ಲರೂ ಜಲಾವರ್ ನ ನಿವಾಸಿಗಳು. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

Home add -Advt

ಕಂಟೇನರ್ ಮೊದಲಿಗೆ ಕಾರಿಗೆ ಡಿಕ್ಕಿ ಹೊಡೆದಿದ್ದು, ಬಳಿಕ 50 ಮೀಟರ್ ಅಂತರದಲ್ಲಿ ಮೂವರು ಪ್ರಯಾಣಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಇಬ್ಬರು ಹಾಗೂ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಣ್ಣನ ಸಾವು; ಅತ್ತಿಗೆಯನ್ನೇ ವಿವಾಹವಾದ ತಮ್ಮ

Related Articles

Back to top button