Latest

ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾದ ಇಂಜಿನಿಯರ್ ಪತ್ನಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೆತ್ತ ತಾಯಿಯೇ ತನ್ನ ಪುಟ್ಟ ಮಗುವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಮೂರುವರೆ ವರ್ಷದ ರಿಯಾ ಎಂಬ ಪುಟ್ಟ ಮಗಳನ್ನು ಕತ್ತು ಬಿಗಿದು ಕೊಂದ 31 ವರ್ಷದ ತಾಯಿ ದೀಪಾ, ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Home add -Advt

’ನನ್ನ ಸಾವಿಗೆ ಯಾರೂ ಕಾರಣರಲ್ಲ, ಜೀವನವೇ ಹೊಲಸು. ನನ್ನನ್ನು ಕ್ಷಮಿಸು ಅಮ್ಮಾ…’ ಎಂದು ಡೆತ್ ನೋಟ್ ನಲ್ಲಿ ದೀಪಾ ಬರೆದಿಟ್ಟಿದ್ದಾರೆ ಎನ್ನಲಾಗಿದೆ.

ಉಡುಪಿಯ ಬ್ರಹ್ಮಾವರ ಮೂಲದ ದೀಪಾ ಹಾಗೂ ಆದರ್ಶ 2017ರಲ್ಲಿ ವಿವಾಹವಾಗಿದ್ದರು. ಆದರ್ಶ್ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ದಂಪತಿಗೆ ಮೂರು ವರ್ಷದ ರಿಯಾ ಎಂಬ ಮಗಳಿದ್ದಳು. ಮದುವೆ ಬಳಿಕ ಮಂತ್ರಿ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಇದೀಗ ದೀಪಾ ಮಗುವನ್ನು ಕತ್ತು ಬಿಗಿದು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್ ನೋಟ್ ಹಾಗೂ ಸಾಫ್ಟ್ ವೇರ್ ಪತಿ ಬಗ್ಗೆ ಸಾಕಷ್ಟು ಶಂಕೆ ವ್ಯಕ್ತವಾಗಿದೆ. ಟೆಕ್ಕಿ ಪತ್ನಿ ಮಗುವನ್ನು ಕೊಂದು ಆತ್ಮಹತ್ಯೆಗೆ ಶರಣಾಗಿರುವುದಾದರೂ ಯಾಕೆ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
ಜಿಲ್ಲಾಧಿಕಾರಿ ಸಹಿ ನಕಲು ಪ್ರಕರಣ; ಕಂದಾಯ ಇಲಾಖೆಯ ಇಬ್ಬರ ಬಂಧನ

Related Articles

Back to top button