Latest

ಜಿಲ್ಲಾಧಿಕಾರಿ ಸಹಿ ನಕಲು ಪ್ರಕರಣ; ಕಂದಾಯ ಇಲಾಖೆಯ ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಸರ್ಕಾರಿ ಜಮೀನು ಕಬಳಿಸಲು ಕೋಲಾರ ಜಿಲ್ಲಾಧಿಕಾರಿ ಸಹಿ ನಕಲು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಂದಾಯ ಇಲಾಖೆ ಆರ್ ಐ ಮಂಜುನಾಥ್ ಹಾಗೂ ಕೇಸ್ ವರ್ಕರ್ ಶೈಲಜಾ ಬಂಧಿತ ಆರೋಪಿಗಳು.

ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿದ್ದ 3.37 ಎಕರೆ ಭೂಮಿಯ ದಾಖಲೆ ಪತ್ರಗಳ ಮೇಲೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ನಕಲು ಸಹಿ ಮಾಡಿ ತಹಶೀಲ್ದಾರ್ ಕಚೇರಿಗೆ ಕಳುಹಿಸಿದ್ದರು. ಸರ್ಕಾರಿ ಕಟ್ಟೆಯನ್ನು ಸರ್ಕಾರಿ ಖರಾಬು ಎಂದು ಆರೋಪಿಗಳು ತಿದ್ದಿದ್ದರು. ಅನುಮಾನಗೊಂದ ತಹಶೀಲ್ದಾರ್ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು.

ಇದೀಗ ಆರೋಪಿಗಳಾದ ಮಂಜುನಾಥ್ ಹಾಗೂ ಶೈಲಜಾ ಇಬ್ಬರನ್ನು ಗಲ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸ್ಯಾಟಲೈಟ್ ಟೌನ್ ನಿರ್ಮಾಣ

Related Articles

Back to top button