ಪ್ರಗತಿವಾಹಿನಿ ಸುದ್ದಿ, ಮುಂಬೈ: ನಾನು ಬಿಸಿಸಿಐಗೆ ಸೇರ್ಪಡೆಯಾದಾಗ ಅದರ ಬ್ಯಾಂಕ್ ಖಾತೆಯಲ್ಲಿ 40 ಕೋಟಿ ರೂ. ಇತ್ತು. ನಾನು ತೊರೆದ ವೇಳೆ 47,680 ಕೋಟಿ ಆಗಿತ್ತು ಎಂದು ಬಿಸಿಸಿಐ ಮಾಜಿ ಚೇರ್ಮನ್ ಲಲಿತ್ ಮೋದಿ ಹೇಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ತಮ್ಮ ಅವಧಿಯಲ್ಲಿ ಬಿಸಿಸಿಐ ಆದಾಯ ಹೆಚ್ಚಳವಾಗಿದ್ದ ಬಗ್ಗೆ ಹೇಳಿಕೊಂಡಿರುವ ಅವರು, ತಮ್ಮ ಬಂಧನದ ಬಗ್ಗೆ ಪ್ರಸ್ತಾಪಿಸುತ್ತ, “ನಾನು ಯಾವ ಸರಕಾರದಿಂದಲೂ ನೆರವು ಪಡೆದಿಲ್ಲ, ಯಾರಿಂದಲೂ ಲಂಚ ಕೂಡ ಸ್ವೀಕರಿಸಿಲ್ಲ. ನಾನು ಹುಟ್ಟುವಾಗಲೇ ಬಾಯಲ್ಲಿ ವಜ್ರದ ಚಮಚ ಇಟ್ಟುಕೊಂಡು ಬಂದವನು” ಎಂದು ಹೇಳಿದ್ದಾರೆ.
ಸುಷ್ಮಿತಾ ಸೇನ್ ಜೊತೆಗಿನ ಪೋಸ್ಟ್ ಭಾರೀ ಪ್ರಮಾಣದ ಟ್ರೋಲ್ ಗೆ ಗುರಿಯಾಗುತ್ತಿದ್ದಂತೆ ಪ್ರಧಾನಿ, ನರೇಂದ್ರ ಮೋದಿ, ಅಮಿತ್ ಶಾ, ಯುಕೆ ಪ್ರಿನ್ಸ್ ಚಾರ್ಲಿಸ್, ದಲೈಲಾಮಾ, ನೆಲ್ಸನ್ ಮಂಡೇಲಾ ಮತ್ತಿತರ ಗಣ್ಯರೊಂದಿಗಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಗೆ ಅವರ ‘ವಜ್ರದ ಚಮಚ’ದ ಉಲ್ಲೇಖಿಸಿ ಟ್ರೋಲ್ ಮಾಡಿರುವ ನೆಟ್ಟಿಗರು ಅವರನ್ನು ‘ಪಲಾಯನಗೈದ ವ್ಯಕ್ತಿ’ ಎಂದು ಜರಿದಿದ್ದಾರೆ.
ಬೆಳಗಾವಿಯಲ್ಲಿ 82 ಆ್ಯಂಬುಲೆನ್ಸ್ ಲೋಕಾರ್ಪಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ