Kannada NewsKarnataka NewsLatest

ಬೈಲಹೊಂಗಲ: ಬೈಕ್ ಗೆ ಕಾರು ಡಿಕ್ಕಿ; ಬಾಲಕ ಸಾವು

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಸವದತ್ತಿ ರಸ್ತೆಯ ಜಾಲಿಕೊಪ್ಪ ಬಳಿ ಬೈಕ್ ಗೆ ಕಾರು ಡಿಕ್ಕಿ ಹೊಡೆದು ಬಾಲಕನೊಬ್ಬ ಮೃತಪಟ್ಟಿದ್ದಾನೆ.

ಚಿವಟಗುಂಡಿ ಗ್ರಾಮದ  ಸಂದೀಪ ಸಿದ್ದಪ್ಪ ಮಲ್ಲೂರ(11) ಮೃತಪಟ್ಟ ಬಾಲಕ. ಬೈಕ್ ಸವಾರ ಈರಪ್ಪ ಚನ್ನಬಸಪ್ಪ ಬಗನಾಳ(32) ಹಾಗೂ ಹಿಂಬದಿ ಸವಾರ ಶಿವಪ್ಪ ಬಸವಂತಪ್ಪ ಮಲ್ಲೂರು ಧಾರವಾಡದಿಂದ ಬೈಲಹೊಂಗಲದತ್ತ ಬರುತ್ತಿದ್ದಾಗ  ಬೈಲಹೊಂಗಲದಿಂದ ಕಿತ್ತೂರು ಕಡೆ ಸಾಗುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆಯಿತು.

Home add -Advt

ಬೈಕ್ ನಲ್ಲಿ ಹಿಂಬದಿ ಸವಾರ ಶಿವಪ್ಪ ಅವರ ಪುತ್ರ ಮುಂದೆ ಕುಳಿತಿದ್ದು ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ. ಬೈಲಹೊಂಗಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂಚಾರಿ ಪಶು ಚಿಕಿತ್ಸಾ ಘಟಕಗಳ ಲೋಕಾರ್ಪಣೆ

Related Articles

Back to top button