ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಆಯ್ಕೆಯಾದ ಎಲ್ಲ ಸಂಸದರು ಸೇರಿ ಒಬ್ಬ ಪ್ರಧಾನಿಯನ್ನು ಆಯ್ಕೆ ಮಾಡುವುದು ಸಂಪ್ರದಾಯ. ಆದರೆ ಈ ಬಾರಿ ಒಬ್ಬ ಪ್ರಧಾನಿ ಎಲ್ಲ ಸಂಸದರನ್ನು ಆಯ್ಕೆ ಮಾಡಿದ್ದಾರೆ!
ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಆಯ್ಕೆಯಾಗಿರುವ ಸಂಸದರನ್ನು ನೆಟ್ಟಿಗರು ಕಾಲೆಳೆಯುತ್ತಿರುವ ರೀತಿ ಇದು.
ಈ ಬಾರಿ ಬಹುತೇಕ ಕ್ಷೇತ್ರಗಳಲ್ಲಿ ಮೋದಿ ಅಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮೋದಿಗಾಗಿ ಮತ ಕೊಡಿ ಎಂದೇ ಬಿಜೆಪಿ ಪ್ರಚಾರ ಮಾಡಿದೆ. ಅಭ್ಯರ್ಥಿಗಳು ಸ್ವಂತ ಸಾಮರ್ಥ್ಯದ ಮೇಲೆ ಆಯ್ಕೆಯಾಗಿದ್ದಕ್ಕಿಂತ ಮೋದಿ ಹೆಸರಲ್ಲಿ ಗೆದ್ದವರೇ ಹೆಚ್ಚು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಮೆಸೇಜ್ ಸದ್ದು ಮಾಡುತ್ತಿದೆ.