ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ತೀವ್ರ ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ಅಧಿವೇಶನದ ವೇಳೆ 10 ದಿನಗಳ ಕಾಲ ಚಿಕಿತ್ಸೆ ಪಡೆದರು.
ಮೈಸೂರಿನ ಲೋಕೇಶ್ ಎನ್ನುವ ನಾಟಿ ವಾದ್ಯರು ಬೊಮ್ಮಾಯಿ ಅವರಿಗೆ ಚಿಕಿತ್ಸೆ ನೀಡಿದರು. ಬೊಮ್ಮಾಯಿ ಅವರು ಅಧಿವೇಶನದ ವೇಳೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿಯೇ ಅವರಿಗೆ ಪ್ರತಿ ನಿತ್ಯ ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆಯಿಂದ ಮಂಡಿ ನೋವು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಇನ್ನು ಒಂದು ತಿಂಗಳು ಕಾಲ ಚಿಕಿತ್ಸೆ ಮುಂದುವರಿಯಲಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ಹಿಂದೆ ಇದೇ ನಾಟಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಅವರ ಶಿಫಾರಸ್ಸಿನಂತೆ ಬೊಮ್ಮಾಯಿ ಚಿಕಿತ್ಸೆ ಪಡೆಯುತ್ತಿದ್ದರೆೆ.
ತೀವ್ರ ಮಂಡಿ ನೋವಿನಿಂದಾಗಿ ಕಳೆದ ಕೆಲವು ದಿನಗಳಿಂದ ಬೊಮ್ಮಾಯಿ ಅವರು ನಡೆದಾಡಲು ಪ್ರಯಾಸ ಪಡುತ್ತಿದ್ದಾರೆ. ಮಂಡಿ ನೋವಿಗೆ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಲಿದ್ದಾರೆ ಎನ್ನುವ ಸುದ್ದಿ ಕೂಡ ಹರಡಿತ್ತು.
ಬೊಮ್ಮಾಯಿ 2 ತಿಂಗಳ ಕಾಲ ಮಂಡಿ ನೋವಿನ ಚಿಕಿತ್ಸೆಗೆ ವಿದೇಶಕ್ಕೆ ತೆರಳಲಿದ್ದಾರೆ. ಆ ವೇಳೆ ಮುಖ್ಯಮಂತ್ರಿ ಸ್ಥಾನ ಬದಲಾಗಲಿದೆ ಎನ್ನುವ ಸುದ್ದಿ ಕೂಡ ಹರಡಿತ್ತು. ನಾಯಕತ್ವ ಬದಲಾವಣೆಗಾಗಿಯೇ ಬೊಮ್ಮಾಯಿ ಅವರನ್ನು ಚಿಕಿತ್ಸೆ ನೆಪದಲ್ಲಿ ವಿದೇಶಕ್ಕೆ ಕಳಿಸಲಾಗುತ್ತಿದೆ ಎನ್ನುವ ವದಂತಿ ಕೂಡ ಇತ್ತು.
ಇದೀಗ ಮಂಡಿ ನೋವಿನಿಂದ ಬೊಮ್ಮಾಯಿ ಸ್ವಲ್ಪ ಮಟ್ಟಿಗೆ ಗುಣಮುಖರಾಗುತ್ತಿದ್ದು, ಚಿಕಿತ್ಸೆ ಮುಂದುವರಿದಿದೆ.
ಮಹಾ ಅಧಿವೇಶನಕ್ಕೂ ಎಂಟ್ರಿಕೊಟ್ಟ ಕೋವಿಡ್; 35 ಜನರಿಗೆ ಕೊರೊನಾ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ