
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾರೀಹಾಳ ಗ್ರಾಮದ ಮರಾಠಾ ಸಮಾಜದ ಮುಖಂಡರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಭೇಟಿಯಾಗಿ, ಮಾರೀಹಾಳ ಗ್ರಾಮದಲ್ಲಿ “ಮರಾಠಾ ಸಾಂಸ್ಕೃತಿಕ ಭವನ” ನಿರ್ಮಾಣ ಮಾಡಲು ಸರಕಾರದಿಂದ ಅನುದಾನ ಮಂಜೂರು ಮಾಡಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.
ಸಮಾಜದ ಮುಖಂಡರ ಮನವಿಯನ್ನು ಸ್ವೀಕರಿಸಿದ ಲಕ್ಷ್ಮಿ ಹೆಬ್ಬಾಳಕರ್, ಆದಷ್ಟು ಬೇಗ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಮಚಂದ್ರ ಚವ್ಹಾಣ, ಬಸವರಾಜ ಮ್ಯಾಗೋಟಿ, ಫಕೀರ ಸಂಗೋಜಿ, ವಿಠ್ಠಲ್ ಮಲ್ಲಾರಿ, ಶಿವರಾಯಿ ಸಾಳುಂಕೆ, ವಿನೋದ ಚವ್ಹಾಣ, ಅಶೋಕ ಸಾಳುಂಕೆ, ಸದಾಶಿವ ಧರ್ಮೋಜಿ, ಸುರೇಶ ಕಿತ್ತೂರ, ಬಸವಣ್ಣಿ ಜಾನಕಿ, ನಾರಾಯಣ ಜಾನಕಿ ಸಿದರಾಮ ಮುಗಳಿ, ರಾಮ ಸಂಗೋಜಿ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ