Belagavi NewsBelgaum NewsKarnataka News

*ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಉತ್ಸವ-2025 ವೀರ ಜ್ಯೋತಿಗೆ ಅದ್ಧೂರಿ ಸ್ವಾಗತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಉತ್ಸವ-2025 ಪ್ರಯುಕ್ತ ಬುಧವಾರ (ಜ.8) ಖಾನಾಪುರ ತಾಲೂಕಿನ ನಂದಗಡದಿಂದ ಪ್ರಾರಂಭವಾದ ವೀರ ಜ್ಯೋತಿ ಯಾತ್ರೆಯು ಬೆಳಗಾವಿ ನಗರಕ್ಕೆ ಆಗಮಿಸಿತು. ನಗರದ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ವೀರ ಜ್ಯೋತಿಗೆ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶುಭಾ ಬಿ. ಅವರು ಸ್ವಾಗತಿಸಿ ವೀರಜ್ಯೋತಿಗ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಬೆಳಗಾವಿ ತಹಶೀಲ್ದಾರ ಬಸವರಾಜ ನಾಗರಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಜನೇವರಿ.12 ಹಾಗೂ 13 ರಂದು ಜರುಗಲಿರುವ ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಉತ್ಸವದ ನಿಮಿತ್ಯ ವೀರ ಜ್ಯೋತಿಯು ಜಿಲ್ಲಾದ್ಯಂತ ಸಂಚರಿಸಿ ಜನೇವರಿ 12 ರಂದು ಸಂಗೋಳ್ಳಿ ಗ್ರಾಮಕ್ಕೆ ಆಗಮಿಸುವುದು.

ಜ್ಯೋತಿ ಯಾತ್ರೆ

ಬುಧವಾರ (ಜ.8) ದಂದು ಖಾನಾಪುರ ತಾಲೂಕಿನ ನಂದಗಡದಿಂದ ಪ್ರಾರಂಭವಾದ ವೀರ ಜ್ಯೋತಿ ಯಾತ್ರೆಯು ಬೆಳಗಾವಿ, ಕಾಕತಿ, ಹುಕ್ಕೇರಿ, ಸಂಕೇಶ್ವರ ಮಾರ್ಗವಾಗಿ ನಿಪ್ಪಾಣಿಗೆ ಆಗಮಿಸಲಿದೆ. ಜನೇವರಿ 9 ರಂದು ನಿಪ್ಪಾಣಿಯಿಂದ ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ, ಮೂಡಲಗಿ ಮಾರ್ಗವಾಗಿ ಗೋಕಾಕಗೆ ಆಗಮಿಸುವದು. ಜನೇವರಿ 10 ರಂದು ಗೋಕಾಕ ದಿಂದ ಅಡಿಬಟ್ಟಿ, ಮೆಳವಂಕಿ, ಕೌಜಲಗಿ, ಚಂದರಗಿ, ಯರಗಟ್ಟಿ, ಕಟಕೋಳ, ರಾಮದುರ್ಗ, ಸವದತ್ತಿ, ಬೆಳವಡಿ, ಕೆಂಗಾನೂರ, ನಯಾನಗರ, ಅಮಟೂರ, ಅನಿಗೋಳ ಮಾರ್ಗವಾಗಿ ಬೈಲಹೊಂಗಲಗೆ ಆಗಮಿಸುವುದು. ಜನೇವರಿ 11 ರಂದು ಬೈಲಹೊಂಗಲದಿಂದ ಯಡಾಲ, ನೇಗಿನಹಾಳ, ಹೊಳಹೊಸೂರ, ಎಂ.ಕೆ.ಹುಬ್ಬಳ್ಳಿ, ದಾಸ್ತಿಕೊಪ್ಪ, ರಾಣಿ ಶುಗರ್ಸ್, ಇಟಗಿ ಕ್ರಾಸ್, ಚನ್ನಮ್ಮನ ಕಿತ್ತೂರ, ಮಲ್ಲಾಪೂರ, ಚಿಕ್ಕನಂದಿಹಳ್ಳಿಯಿಂದ ಸಂಗೋಳ್ಳಿ ಸೈನಿಕ ಶಾಲೆಗೆ ಆಗಮಿಸುವುದು. ಜನೇವರಿ 12 ರಂದು ಸಂಗೋಳ್ಳಿ ಉತ್ಸವದ ಮೆರವಣಿಗಯಲ್ಲಿ ಪಾಲ್ಗೊಳ್ಳುವದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button