Belagavi NewsBelgaum NewsKannada NewsKarnataka News

ಎಂಇಎಸ್ ಕಾರ್ಯಕರ್ತನ ಮನೆ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳ ಗುಂಪು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಂಇಎಸ್  ಕಾರ್ಯಕರ್ತರೊಬ್ಬರ ಮನೆ ಮೇಲೆ 25 ಕ್ಕೂ ಹೆಚ್ಚು ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ಈ ಘಟನೆಯಲ್ಲಿ ಅವರ ಕುಟುಂಬದ ನಾಲ್ವರಿಗೆ ಗಾಯವಾಗಿದೆ.‌

ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ಸಮೀಪದ ಭಾರತ್ ನಗರದಲ್ಲಿ ಭಾನುವಾರ ಈ ಘಟನೆ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದವರನ್ನು ಸಚಿನ್ ಶಾಂತಾರಾಮ್ ಕೆಲ್ವೇಕರ್ (36), ನಿತಿನ್ ಶಾಂತಾರಾಮ್ ಕೆಲ್ವೇಕರ್ (34), ಸುಂದರ್ ಶಾಂತಾರಾಮ್ ಕೆಲ್ವೇಕರ್ (32), ಮತ್ತು ಅವರ ತಾಯಿ ಲಕ್ಷ್ಮೀ ಶಾಂತಾರಾಮ್ ಕೆಲ್ವೇಕರ್ (56) ಎಂದು ಗುರುತಿಸಲಾಗಿದೆ. 

Home add -Advt

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೆಲ್ವೇಕರ್ ಮನೆ ಮೇಲೆ ದಾಳಿಯ ಸುದ್ದಿ ತಿಳಿದ ತಕ್ಷಣ ಎಂಇಎಸ್ ಮುಖಂಡರು ಸ್ಥಳಕ್ಕೆ ಧಾವಿಸಿದ್ದಾರೆ.‌

Related Articles

Back to top button