Kannada News

ಕ್ಷೇತ್ರದ ಜನರ ಆಶೀರ್ವಾದದಿಂದ ಹ್ಯಾಟ್ರಿಕ್ ಸಾಧನೆ: ಶಶಿಕಲಾ ಜೊಲ್ಲೆ


– ಮೂರನೇ ಬಾರಿ ನಿಪ್ಪಾಣಿ ಕ್ಷೇತ್ರದಿಂದ ಆಯ್ಕೆ
– ಕ್ಷೇತ್ರದ ಅಭಿವೃದ್ದಿಯ ಕಾರ್ಯಗಳೇ ಬೆನ್ನೆಲುಬು

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಕ್ಷೇತ್ರದ ಜನರ ಆಶೀರ್ವಾದದಿಂದ ಮೂರನೇ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದು, ಈ ಹ್ಯಾಟ್ರಿಕ್ ಸಾಧನೆ ಸಂತಸ ತಂದಿದೆ ಎಂದು ನಿಪ್ಪಾಣಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.

Home add -Advt

ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿ 72,952 ಮತಗಳನ್ನು ಪಡೆದು ಆಯ್ಕೆಯಾದ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸುಮಾರು 2 ಸಾವಿರ ಕೋಟಿ ರೂಪಾಯಿಗಳಷ್ಟು ಅನುದಾನದ ಮೂಲಕ ಕ್ಷೇತ್ರವನ್ನು ಅಭಿವೃದ್ದಿಗೊಳಿಸಿದ್ದೇನೆ. ಎರಡು ಬಾರಿ ಸಚಿವೆಯಾಗಿ ರಾಜ್ಯದ ಅಭಿವೃದ್ದಿಗೂ ಕೊಡುಗೆಯನ್ನು ನೀಡಿದ್ದೇನೆ. ಈ ಎಲ್ಲಾ ಅವಕಾಶಗಳಿಗೂ ಮೂಲ ಕಾರಣ ನಿಪ್ಪಾಣಿ ಕ್ಷೇತ್ರದ ಮತದಾರರ ಆಶೀರ್ವಾದ. ಈ ಬಾರಿಯೂ ಕೂಡಾ ಆಶೀರ್ವಾದ ನೀಡುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡುವ ಸದಾವಕಾಶ ನೀಡಿದ್ದಾರೆ. ಈ ಆಶೀರ್ವಾದದಿಂದ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿಯ ಕಾರ್ಯಗಳನ್ನು ಕೈಗೊಳ್ಳುವ ಬಲ ದೊರೆತಿದೆ ಎಂದರು.

ಶಶಿಕಲಾ ಜೊಲ್ಲೆ ಅವರ ಹ್ಯಾಟ್ರಿಕ್ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ನಗರದಲ್ಲಿ ಬಿಜೆಪಿ ಅಭಿಮಾನಿಗಳು ಸಿಹಿ ಹಂಚಿ, ಪಟಾಕ್ಷಿ ಸಿಡಿಸಿ, ಗುಲಾಲ ಎರಚಿ ಸಂಭ್ರಮಿಸಿದರು. ನಗರದ ಬೆಳಗಾವಿ ನಾಕಾ ಬಳಿ ಕಾರ್ಯಕರ್ತರು ಡಿಜೆ ತಾಳಕ್ಕೆ ಕುಣಿದು ಕುಪ್ಪಳಿಸಿದರು.

https://pragati.taskdun.com/cm-basavaraj-bommairesignvidhanasabha-electioncongress-win/

Related Articles

Back to top button