Belagavi NewsBelgaum NewsKannada NewsKarnataka News

*ಬೃಹತ್ ಮರ ಬಿದ್ದು ಕಾರು, ಬೈಕ್ ಗಳಿಗೆ ಹಾನಿ*

ಪ್ರಗತಿವಾಹಿನಿ ಸುದ್ದಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಬಿಎಸ್ಎನ್ಎಲ್ ಕಚೇರಿ ಆವರಣದಲ್ಲಿನ ಬೃಹತ್ ಮರ ಬಿದ್ದು 1 ಕಾರು, 3 ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿರುವ ಘಟನೆ ಮಂಗಳವಾರ ನಡೆದಿದೆ.

ಸುತ್ತಲಿನ ಜನತೆ ಬಿಎಸ್ಎನ್ಎಲ್ ಕಚೇರಿಯ ಅಧಿಕಾರಿಗಳಿಗೆ ಹಳೆಯದಾದ ಮರ ತೆರೆವುಗೊಳಿಸುವಂತೆ ಸಾಕಷ್ಟು ಬಾರಿ ಹೇಳಿದರೂ ನಿರ್ಲಕ್ಷ್ಯ ವಹಿಸಿದ್ದಕ್ಕೆ ಇಂದು ಮರ ಪಕ್ಕದ ಎಪಿಎಂಸಿ ಮಳಿಗೆಗಳ ಹತ್ತಿರ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದಿರುವುದರಿಂದ ಕಾರ ಹಾಗೂ ಬೈಕ್ ಗಳು ನುಜ್ಜುಗುಜ್ಜಾಗಿದೆ.

Home add -Advt

ಬಿ ಎಸ್ ಎನ್ ಎಲ್ ಕಚೇರಿಯಲ್ಲಿ ಆಧಾರ ಕಾರ್ಡ್ ಅಪಡೇಟ್ ಮಾಡುವ ಕಾರ್ಯ ನಿರ್ವಹಿಸುತ್ತಿರುವದರಿಂದ ದಿನಾಲೂ ಇಲ್ಲಿ ನೂರಾರು ಜನ ತಮ್ಮ ಕೆಲಸ ಕಾರ್ಯಗಳಿಗೆ ಬರುತ್ತಾರೆ. ಅದೃಷ್ಟಾವಶಾತ್ ಮರ ಪಕ್ಕದ ಎಪಿ ಎಂಸಿ ಮಳಿಗೆಗಳ ಮೇಲೆ ಉರುಳಿದ್ದರಿಂದ ಯಾವುದೇ ‌ಪ್ರಾಣ ಹಾನಿಯಾಗಿಲ್ಲ.

ಸ್ಥಳಕ್ಕೆ ಪಿ ಎಸ್ ಐ ಎಫ್ ವೈ ಮಲ್ಲೂರ ಭೇಟಿ ನೀಡಿ ಪರಿಶೀಲಿಸಿದರು.

Related Articles

Back to top button