Belagavi NewsBelgaum NewsKannada NewsKarnataka News

*ರೇಣುಕಾಸ್ವಾಮಿ ಕೊಲೆ ಕೇಸ್: ಎ 14 ಆರೋಪಿ ಇಂದು ಹಿಂಡಲಗಾ ಜೈಲಿಗೆ*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ ಗ್ಯಾಂಗ್ ನಲ್ಲಿದ್ದ ಎ 14 ಆರೋಪಿ ಪ್ರದೂಶ್ ಬುಧವಾರ ರಾತ್ರಿ ಬೆಳಗಾವಿ ಹಿಂಡಲಗಾ ಕಾರಾಗೃಹಕ್ಕೆ ಬರಲಿದ್ದಾನೆ.

ಪರಪ್ಪನ ಅಗ್ರಹಾರದಲ್ಲಿ ಐಶಾರಾಮಿ ಸವಲತ್ತು ಪಡೆದಿದ್ದ ಎಂಬ ಆರೋಪ ಇರುವ ಕಾರಣ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. 

Home add -Advt

ವಿಷಯ ತಿಳಿಯುತ್ತಿದ್ದಂತೆ ಪ್ರದೂಶ್ ಕಣ್ಣೀರು ಹಾಕಿದ್ದಾನೆ ಎಂದು ತಿಳಿದುಬಂದಿದೆ. ರಾಜ್ಯದಲ್ಲೇ ಅತ್ಯಂತ ದೊಡ್ಡ ಜೈಲಾಗಿರುವ ಹಿಂಡಲಗಾ ಜೈಲು ಕೊಲೆಗಡುಕ ಆರೋಪಿಗಳಿಗೆ ಹೇಳಿ ಮಾಡಿಸಿದ ಜಾಗ. ವಿಪರೀತ ಮಳೆ, ಬಿಸಿಲಿನಿಂದ ಕೂಡಿದ ಬೆಳಗಾವಿ ವಾತಾವರಣದಲ್ಲಿ ಕಾಲ ಕಳೆಯುವುದು ಸುಲಭವಲ್ಲ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ‘ಡಿ ಗ್ಯಾಂಗ್’ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ನಟ ದರ್ಶನ್ ನನ್ನು ಇಂದು ಸಂಜೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಆಧ್ಯತೆ ಇದೆ.

Related Articles

Back to top button